ಪುತ್ತೂರು: ಪಪ್ಪಾಯಿ ಮರ ಬಿದ್ದು ಮನೆಗೆ ಹಾನಿಯುಂಟಾದ ಘಟನೆ ಜು.23 ರಂದು ಒಳಮೊಗ್ರು ಗ್ರಾಮದ ಕೊಲತ್ತಡ್ಕದಲ್ಲಿ ನಡೆದಿದೆ. ಕೊಲತ್ತಡ್ಕ ಅಂಗನವಾಡಿ ಬಳಿಯ ಭೀಪಾತುಮ್ಮರವರ ವಾಸದ ಮನೆಗೆ ಮನೆ ಬಳಿ ಇದ್ದು ಪಪ್ಪಾಯಿ ಮರವೊಂದು ಮುರಿದು ಬಿದ್ದು ಮನೆಗೆ ಹಾಕಿದ್ದ ಸಿಮೆಂಟ್ ಶೀಟುಗಳು ಮುರಿದು ಬಿದ್ದು ನಷ್ಟ ಉಂಟಾಗಿದೆ.
ಸ್ಥಳಕ್ಕೆ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಲತೀಫ್ ಕುಂಬ್ರ, ಗ್ರಾಮ ಆಡಳಿತ ಅಧಿಕಾರಿ ಸುನೀತಾರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.