ಪುತ್ತೂರು: ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘವು ಜುಲೈ 25 ರಿಂದ 31ರ ತನಕ ‘ಭೀಷ್ಮ ಭಾರತ’ ಎನ್ನುವ ಶೀರ್ಷಿಕೆಯಲ್ಲಿ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿದೆ. ಪುತ್ತೂರು ಸರ್ವೆಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಂಜೆ ಗಂಟೆ 4 ರಿಂದ 8 ರ ತನಕ ಜರುಗಲಿದೆ.
ಮಹಾಭಾರತದ ಭೀಷ್ಮನ ಹುಟ್ಟಿನಿಂದ ತೊಡಗಿ, ಶರಶಯ್ಯೆಯ ತನಕದ ಕಥಾಹಂದರವನ್ನು ಒಳಗೊಂಡ ಕಥೆಯನ್ನು ಏಳು ದಿವಸಗಳ ತಾಳಮದ್ದಳೆಗಳಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಅನುಭವಿ ಕಲಾವಿದರು ತಾಳಮದ್ದಳೆಯಲ್ಲಿ ಭಾಗವಹಿಸಲಿದ್ದಾರೆ.
“ಗಾಂಗೇಯ, ಭೀಷ್ಮಾಭಿದಾನ, ಕಾಶಿ ಗಮನ, ಅಂಬಾ ಶಪಥ, ಗಂಗಾ ಸಾರಥ್ಯ, ಭೀಷ್ಮ ಸೇನಾಧಿಪತ್ಯ, ಕರ್ಮಬಂಧ-ಶರಶಯ್ಯೆ’ ಪ್ರಸಂಗಗಳ ತಾಳಮದ್ದಳೆಗಳು ನಡೆಯಲಿವೆ. ಮಹಾಭಾರತದ ಭೀಷ್ಮನ ಜೀವನಯಾನವನ್ನು ಅರಿಯುವ ಸದವಕಾಶವು ಸಪ್ತಾಹದಿಂದ ಪ್ರಾಪ್ತವಾಗಲಿದೆ.
ಜುಲೈ 25 ಶುಕ್ರವಾರ, ಸಂಜೆ ಗಂಟೆ 4ಕ್ಕೆ ಸರ್ವೆಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಶಿವನಾಥ ರೈ ಮೇಗಿನಗುತ್ತು ಇವರು ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಲಮೆ ಶ್ರೀ ರಾಘವೇಂದ್ರ ಮಠದ ಡಾ. ಸೀತಾರಾಮ ಭಟ್ ಆಗಮಿಸಲಿದ್ದಾರೆ.
ಜುಲೈ 31, ಗುರುವಾರದಂದು ಸಪ್ತಾಹದ ಸಮಾರೋಪ ಸಮಾರಂಭ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅರ್ಚಕ ಶ್ರೀ ಶ್ರೀರಾಮ ಕಲ್ಲೂರಾಯರಿಗೆ ಸಂಮಾನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಮುಕ್ತ ಸ್ವಾಗತವೆಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಶ್ರೀ ಭಾಸ್ಕರ ಬಾರ್ಯ ತಿಳಿಸಿರುತ್ತಾರೆ.