ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ಘಟಕ ನೆ. ಮುಡ್ನೂರು, ಬಡಗನ್ನೂರು ಇದರ ಮಹಾಸಭೆ- ಉಚಿತ ಪುಸ್ತಕ ವಿತರಣೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ಘಟಕ ನೆ. ಮುಡ್ನೂರು ಮತ್ತು ಬಡಗನ್ನೂರು ಇದರ ಮಹಾಸಭೆ ಮತ್ತು ಉಚಿತ ಪುಸ್ತಕ ವಿತರಣಾ ಸಭೆ ಇತ್ತೀಚೆಗೆ ಈಶ್ವರಮಂಗಲ ಪಾಳ್ಯತ್ತಡ್ಕ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.


ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಸರೋಳಿಮೂಲೆ ಇವರ ಅಧ್ಯಕ್ಷತೆಯಲ್ಲಿ ಜರಗಿದ ಮಹಾಸಭೆಯನ್ನು ಬಿಲ್ಲವ ಸಂಘ ಪುತ್ತೂರು ಕಾರ್ಯದರ್ಶಿ ಚಿದಾನಂದ ಸುವರ್ಣ ಇವರು ಉದ್ಘಾಟಿಸಿದರು. ಯುವ ವಾಹಿನಿ ಅಧ್ಯಕ್ಷ ಅಣ್ಣಿ ಪೂಜಾರಿ, ವಿಮಲಾ ಸುರೇಶ್ ಉಪಾಧ್ಯಕ್ಷರು ಪುತ್ತೂರು ಬಿಲ್ಲವ ಸಂಘ, ಪಡವನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ, ಕಾವು ಗ್ರಾಮ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಇವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಸರೋಳಿಮೂಲೆ, ಉಪಾಧ್ಯಕ್ಷರಾಗಿ ಯಶೋಧ ಪೆಲತ್ತಡಿ, ಕಾರ್ಯದರ್ಶಿಯಾಗಿ ಉಮೇಶ್ ಪೂಜಾರಿ ಮುಂಡ್ಯ, ಜತೆ ಕಾರ್ಯದರ್ಶಿಯಾಗಿ ಸುನೀತಾ ಹರೀಶ್ ಪೂಜಾರಿ ಸುರುಳಿ ಮೂಲೆ, ಕೋಶಾಧಿಕಾರಿಯಾಗಿ ವಿಠಲ ಪೂಜಾರಿ ತಲೆಬೈಲು ಮಹಿಳಾ ಸಮಿತಿ ಅಧ್ಯಕ್ಷರಾಗಿ ರೋಹಿಣಿ ಶಿವರಾಂ ಇವರನ್ನು ಆಯ್ಕೆ ಗೊಳಿಸಲಾಯಿತು.
ಪ್ರಜ್ಞಾ ಮತ್ತು ಅಶ್ವಿತ್ ಮುಂಡ್ಯ ವಿವಿಧ ಕಾರ್ಯಕ್ರಮ ನಿರ್ವಹಸಿದರು. ರೋಹಿಣಿ ಶಿವರಾಂ ಸ್ವಾಗತಿಸಿ, ರತಿ ರಮೇಶ್ ಪೂಜಾರಿ ಮುಂಡ್ಯ ವಂದಿಸಿದರು.

LEAVE A REPLY

Please enter your comment!
Please enter your name here