ನೆಲ್ಯಾಡಿ: ಇಚ್ಲಂಪಾಡಿ ಗ್ರಾಮ ಬಿಲ್ಲವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಇಚ್ಲಂಪಾಡಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಗಿರೀಶ್ ಸಾಲ್ಯಾನ್ ಬದನೆ, ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಪೊಯ್ಯೆತಡ್ಡ, ಉಪಾಧ್ಯಕ್ಷರಾಗಿ ಹರೀಶ್ಚಂದ್ರ ಪೂಜಾರಿ ಮುಚ್ಚಿಲ, ಕೋಶಾಧಿಕಾರಿಯಾಗಿ ಲೋಕೇಶ್ ಕೋಟೆಗುಡ್ಡೆ, ಜೊತೆಕಾರ್ಯದರ್ಶಿಯಾಗಿ ಶಶಿಧರ ಪಿ.ಪೊಯ್ಯೆತ್ತಡ್ಡ ಆಯ್ಕೆಯಾದರು.

ಗೌರವಾಧ್ಯಕ್ಷ ಇಂದ್ರಪೂಜಾರಿ, ಪುತ್ತೂರು ತಾಲೂಕು ಬಿಲ್ಲವ ಸಮಿತಿ ಕೋಶಾಧಿಕಾರಿ ಮಹೇಶ್ಚಂದ್ರ, ಹಿರಿಯರಾದ ಜಾನಪ್ಪ ಪೂಜಾರಿ ಪಟ್ಟೆಗುಡ್ಡೆ, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.