ಎರಡೂ ಮನಸ್ಸುಗಳನ್ನು ಒಂದು ಮಾಡುವ ಕೆಲಸವಾಗಬೇಕಾಗಿದೆ-ಕೆ.ಪಿ ನಂಜುಂಡಿ

0

ಪುತ್ತೂರು:ಮಕ್ಕಳು ಬೆಳೆದು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕೆಂದು ಬೆಳೆಸಿ, ವಿದ್ಯೆ ನೀಡಿ ಭವಿಷ್ಯ ರೂಪಿಸುತ್ತಾರೆ.ಭವಿಷ್ಯದ ಬಗ್ಗೆ ಅರಿವಿಲ್ಲದೆ, ಜೀವನವನ್ನು ಹುಡುಗಾಟಿಕೆಯಿಂದ ತೆಗೆದುಕೊಂಡಾಗ ಸಮಾಜವೂ ತಲೆ ತಗ್ಗಿಸಬೇಕಾಗುತ್ತದೆ.ಯಾವ ಮನೆಯಲ್ಲೂ ಇಂತಹ ಸನ್ನಿವೇಶಗಳು ಬರಬಾರದು.ತಪ್ಪಾದಾಗ ಸರಿಪಡಿಸುವ ಮನಸ್ಸು ಎರಡೂ ಕಡೆಯಲ್ಲಿರಬೇಕು.ಎರಡೂ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಪರವಾಗಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಅಪ್ರಾಪ್ತ ಬಾಲಕನಿದ್ದಾಗ ಘಟನೆಯನ್ನು ಮುಚ್ಚಿಟ್ಟು, ಪ್ರಾಯಕ್ಕೆ ಬಂದಾಗ ವಿವಾಹ ಮಾಡುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡುವುದು ಕಷ್ಟಕರ.ಘಟನೆ ನಡೆದು ಹೋಗಿದ್ದು,ಜೀವನ ಎನ್ನುವುದು ಮುಖ್ಯವಾಗಿದೆ.ಇಬ್ಬರೂ ಒಂದಾಗಿ ಮಗುವಿಗೆ ತಾಯಿ ತಂದೆಯ ಪ್ರೀತಿ ಸಿಗಬೇಕು.ಬಡ ಕುಟುಂಬಕ್ಕೆ ಕಾನೂನಿನ ಅರಿವೂ ಇಲ್ಲದಾಗಿದೆ.ಎರಡೂ ಮನಸ್ಸುಗಳನ್ನು ಒಂದು ಮಾಡುವುದು ಮಾತುಕತೆಯ ಮೂಲಕ ನಡೆಯಬೇಕಾಗಿದೆ. ಸಮಾಜ ಸಂಘಟಿತವಾಗಿ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ಆಗಮಿಸಿದ್ದೇನೆ ಎಂದರು.ವಿಚಾರ ಇದೀಗ ಕೋರ್ಟ್‌ನಲ್ಲಿದೆ.ಕಾನೂನು ತನ್ನ ಕೆಲಸವನ್ನು ಮಾಡುತ್ತಿದ್ದು, ಅದರ ಮೇಲೆ ಸಂಪೂರ್ಣ ವಿಶ್ವಾಸವಿದೆ.ಹುಡುಗ, ಹುಡುಗನ ತಂದೆ ತಾಯಿಯ ಮೇಲೆಯೂ ಸಂಪೂರ್ಣ ವಿಶ್ವಾಸವಿದೆ.ಹುಡುಗನ ಮನೆಯವರು ಮಾತುಕತೆಗೆ ಅವಕಾಶ ನೀಡಿದರೆ, ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ಮಾತುಕತೆ ನಡೆಸುತ್ತೇವೆ.ಪ್ರಕರಣವನ್ನು ಮುಗಿಸಲು ಹುಡುಗನ ಕಡೆಯವರು ಮನಸ್ಸು ಮಾಡಬೇಕು.ಹುಡುಗನಿಗೂ ಬೇಕಾದ ಎಲ್ಲಾ ಪ್ರೋತ್ಸಾಹವನ್ನು ನೀಡುತ್ತೇವೆ.ಇಂತಹ ವಿಚಾರವನ್ನು ಹಣ, ರೌಡಿಸಂ, ಅಽಕಾರದಿಂದ ಬಗೆಹರಿಸಲು ಸಾಧ್ಯವಿಲ್ಲ ಎಂದವರು ತಿಳಿಸಿದರು.ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ,ಸಂತ್ರಸ್ತ ಯುವತಿಯ ತಾಯಿ ನಮಿತಾ, ಯುವತಿ ಚಿಕ್ಕಪ್ಪ ಹೇಮಚಂದ್ರ, ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ವಿಶ್ವಕರ್ಮ ಉಪಸ್ಥಿತರಿದ್ದರು.

ಹುಡುಗನ ಕುಟುಂಬಕ್ಕೆ ಮನವಿ
ಕಾನೂನು ಕ್ರಮದಿಂದ ಹುಡುಗ ಹೊರಗೆ ಬರುವುದಕ್ಕೆ ಸಾಧ್ಯತೆಯೇ ಇಲ್ಲ.ಹುಡುಗನಿಗೆ ಶಿಕ್ಷೆ ನೀಡಬೇಕೆಂಬುದು ನಮ್ಮ ಮನಸ್ಸಿನಲ್ಲಿಲ್ಲ.ಇದನ್ನು ಮುಂದುವರಿಸಿಕೊಂಡು ಹೋಗುವುದರಿಂದ ಏನೂ ಪ್ರಯೋಜನವಿಲ್ಲ.ಎರಡೂ ಕುಟುಂಬ ಒಂದಾಗಿರಲು ಏನೆಲ್ಲಾ ಬೇಕು ಹಿಂದೆ ನಿಂತು ಸಹಕಾರ ನೀಡುತ್ತೇವೆ.ಜೈಲಲ್ಲಿ ಇದ್ದು ಸಾಧನೆ ಮಾಡುವುದು ಏನಿದೆ.ಆಯಸ್ಸು, ಭವಿಷ್ಯ ಹೋಗುತ್ತದೆ. ಇದೆಲ್ಲವನ್ನೂ ಆಲೋಚನೆ ಮಾಡಿ ಮನಸ್ಸು ಬದಲಾಯಿಸಿಕೊಂಡು, ಪ್ರತಿಷ್ಠೆಯನ್ನು ಮುಂದುವರಿಸದೆ,ಹುಡುಗಿಯನ್ನು ಮನೆ ತುಂಬಿಸಬೇಕು ಎಂದು ಹುಡುಗನ ಕುಟುಂಬಕ್ಕೆ ಮನವಿ ಮಾಡುವುದಾಗಿ ಕೆ.ಪಿ.ನಂಜುಡಿ ತಿಳಿಸಿದರು.

LEAVE A REPLY

Please enter your comment!
Please enter your name here