ಕರುನಾಡಿನ ಸಮಸ್ತದ ಶೈಕ್ಷಣಿಕ ಕ್ರಾಂತಿಗೆ ಶಕ್ತಿ ತುಂಬಿದ ನೂರುಲ್ ಹುದಾ: ತೋಡಾರ್ ಉಸ್ತಾದ್
ಪುತ್ತೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಸಮಾರಂಭ ಇದರ ಸ್ವಾಗತ ಸಮಿತಿ ರಚನಾ ಮಹಾಸಭೆಯು ಶಹೀದಿಯ ನಗರ ಮಾಡನ್ನೂರಿನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮಾತನಾಡಿ, ಸವಾಲುಗಳು, ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡವರಿಂದಲೇ ಸಮಾಜದಲ್ಲಿ ಕ್ರಾಂತಿಯನ್ನು ಸೃಷ್ಟಿಸಲು ಸಾಧ್ಯ. ಕೇವಲ ಹತ್ತು ವರ್ಷಗಳಲ್ಲಿ ನೂರುಲ್ ಹುದಾ ಸಂಸ್ಥೆಯು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ, ಇದನ್ನು ಮುನ್ನಡೆಸುವವರ ದೃಢ ಸಂಕಲ್ಪ ಮತ್ತು ಇಚ್ಛಾಶಕ್ತಿಯಾಗಿದೆ ಇದೇ ರೀತಿಯ ಗುಣವಿಶೇಷತೆಗಳನ್ನು ಹೊಂದಿದ್ದ ಸಾತ್ವಿಕ ಉಲಮಾಗಳ ನಾಯಕತ್ವದ ಪರಿಣಾಮವಾಗಿ ಸಮಸ್ತವು ಇಂದು ತನ್ನೆದುರಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಶತಮಾನದ ಅಂಚಿನಲ್ಲಿ ನಿಂತಿದೆ. ಈ ಎಲ್ಲಾ ಸಂಭ್ರಮಗಳನ್ನು ನಾವೆಲ್ಲರೂ ಸಂತೋಷದಿಂದ ಸ್ವೀಕರಿಸಿ ಒಗ್ಗಟ್ಟಿನಿಂದ ಆಚರಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಮಾತನಾಡಿ, ಮಾಡನ್ನೂರಿನ ಮಣ್ಣಿನಲ್ಲಿ ಧಾರ್ಮಿಕ-ಲೌಖಿಕ ಸಮನ್ವಯ ಶಿಕ್ಷಣ ಸಂಸ್ಥೆಯಾಗಿ ಬಾನೆತ್ತರಕ್ಕೆ ಬೆಳೆದ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯು ದಶಮಾನೋತ್ಸವ ಆಚರಣೆಯ ಸಂಭ್ರಮಲ್ಲಿದ್ದು, ಈ ಸಮ್ಮೇಳನವನ್ನು ಐತಿಹಾಸಿಕವಾಗಿಸುವುದರ ಜೊತೆಗೆ ಸಮಸ್ತದ ಶತಮಾನೋತ್ಸದ ಪ್ರಚಾರ ಸಮ್ಮೇಳನವಾಗಿ ಇದನ್ನು ಆಚರಿಸೋಣ. ಸಮಸ್ತದ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿರುವ ಈ ಸಂಸ್ಥೆಯು ಇನ್ನಷ್ಟು ಉತ್ತುಂಗಕ್ಕೇರಲು ಎಲ್ಲರೂ ತನುಮನದಿಂದ ಸಹಾಯ-ಸಹಕಾರವನ್ನು ನೀಡೋಣ ಎಂದು ಹೇಳಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲ ಫೈಝಿ ಕೊಡಗು ಮಖಾಂ ಝಿಯಾರತ್ ಗೆ ನೇತೃತ್ವ ನೀಡಿದರು. ನಂತರ ಮಾತನಾಡಿದ ಅವರು, ಅಹ್ಲುಸುನ್ನಾದ ಆಶಯ ಆದರ್ಶಗಳ ಸಂರಕ್ಷಣೆಗಾಗಿ ರೂಪುಗೊಂಡ ಸಮಸ್ತ ಎಂಬ ಉಲಮಾ ಸಂಘಟನೆಯು ಶತಮಾನೋತ್ಸವದ ಸಂಭ್ರಮದಲ್ಲಿರುವಾಗಲೇ ಕರುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಸಿದ ನೂರುಲ್ ಹುದಾ ಸಂಸ್ಥೆಯು ದಶಮಾನೋತ್ಸವವನ್ನು ಆಚರಿಸುತ್ತಿದೆ. ಸಮಸ್ತ ಪೋಷಕ ಸಂಘಟನೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ದಾರುಲ್ ಹುದಾದ ಸಹಸಂಸ್ಥೆಯಾಗಿ ನೂರುಲ್ ಹುದಾ ಇಲ್ಲಿ ನಡೆಸಿದ ಶೈಕ್ಷಣಿಕ ಚಳುವಳಿಯನ್ನು ಸ್ಮರಿಸದಿರಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ನೂರುಲ್ ಹುದಾ ಸಂಸ್ಥೆಯು ಸದೃಢವಾದ ತಂಡವೊಂದನ್ನು ಕಟ್ಟಿಕೊಂಡು ಸಮುದಾಯದ ಸೇವೆಯಲ್ಲಿ ನಿರಂತವಾಗಿ ತೊಡಗಿಸಿ ಕೊಂಡಿದೆ. ಇದರ ಯಶಸ್ವಿಯಲ್ಲಿ ಕೈ ಜೋಡಿಸಿದ ಸರ್ವರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಅಡ್ವ. ಹನೀಫ್ ಹುದವಿ ದೇಲಂಪಾಡಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಶತಮಾನದ ಅಂಚಿನಲ್ಲಿರುವ ಸಮಸ್ತ ಎಂಬ ಉಲಮಾ ಸಂಘಟನೆಗೆ ಶಕ್ತಿ ತುಂಬುವ ಕೆಲಸವನ್ನು ನೂರುಲ್ ಹುದಾ ಸಂಸ್ಥೆಯು ಮಾಡುತ್ತಾ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎಸ್. ಮುಹಮ್ಮದ್, ಟಿ.ಎಂ. ಶಹೀದ್ ತೆಕ್ಕಿಲ್, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ, ಸುಳ್ಯ ಪ್ರಾಧಿಕಾರ ಅಧ್ಯಕ್ಷ ಮುಸ್ತಫಾ ಜನತಾ ಸುಳ್ಯ, ಸ್ಥಳೀಯ ಮಸೀದಿ ಖತೀಬರಾದ ಎಸ್.ಬಿ. ಮುಹಮ್ಮದ್ ದಾರಿಮಿ, ಆರ್ ಐಸಿ ಸಂಸ್ಥೆಯ ಚೇರ್ಮಾನ್ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಮುಂತಾದವರು ಮಾತನಾಡಿ ಶುಭ ಹಾರೈಸಿದರು.
ಸಂಸ್ಥೆಯ ಪರಿಚಯಿಸುವ ಕೈಪಿಡಿಯನ್ನು ಸೈಯ್ಯದ್ ಬಾಫಖಿ ಫೌಂಡೇಶನ್ ಚೇರ್ಮಾನ್ ಡಾ. ಶೈಖ್ ಬಾವಾ ಮಂಗಳೂರು ಬಿಡುಗಡೆಗೊಳಿಸಿದರು. ಸಮ್ಮೇಳನದ ಪ್ರಚಾರದ ಪೋಸ್ಟರ್ ಅನ್ನು ನೂರುಲ್ ಹುದಾ ಯುಎಇ ಪ್ರತಿನಿಧಿ ಅನ್ಸಾರ್ ಬೆಳ್ಳಾರ್ ಮತ್ತು ಸಂಸ್ಥೆಯ ಉಪಾಧ್ಯಕ್ಷರಾದ ಎನ್.ಎಸ್. ಅಬ್ದುಲ್ಲಾ ಹಾಜಿ ಈಶ್ವರಮಂಗಲ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಲಮಾ ನಾಯಕರುಗಳಾದ ಸೈಯ್ಯದ್ ಬುರ್ಹಾನ್ ಅಲಿ ತಂಙಳ್, ಸೈಯ್ಯದ್ ಅಫ್ವಾಂ ತಂಙಳ್ ಕರಾವಳಿ, ಸಲಾಂ ತಂಙಳ್ ಕುಶಾಲನಗರ, ಕೆ.ಪಿ.ಎಂ. ಶರೀಫ್ ಫೈಝಿ ಕಡಬ, ಹಮೀದ್ ದಾರಿಮಿ ಸಂಪ್ಯ, ನಸೀಹ್ ದಾರಿಮಿ ಬೆಳ್ಳಾರೆ, ಮುಸ್ತಫಾ ಅನ್ಸಾರಿ ಅಡ್ಯಾರ್ ಕಣ್ಣೂರು, ಇರ್ಶಾದ್ ಫೈಝಿ ಪಾಲ್ತಾಡ್, ಹುಸೈನ್ ರಹ್ಮಾನಿ ಕಾಶಿಪಟ್ಟಣ, ಶಂಸುದ್ದೀನ್ ದಾರಿಮಿ ಪೊಮ್ಮಲ, ಮುಹಮ್ಮದ್ ನವವಿ ಮುಂಡೋಳೆ, ಅಲಿ ಉಸ್ತಾದ್ ಬನ್ನೂರು, ಶರೀಫ್ ಹೈತಮಿ ಕುಂತೂರು, ಶುಕೂರು ದಾರಿಮಿ ಕರಾಯ, ರಝಾಕ್ ಸುಲ್ತಾನ್ ದಾರಿಮಿ, ಶರೀಫ್ ಮುಸ್ಲಿಯಾರ್ ಮಾಡನ್ನೂರು, ಕೆ.ಎಂ.ಎಸ್. ಫೈಝಿ ಕರಾಯ, ಉಮರಾ ನಾಯಕರುಗಳಾದ ರಝಾಕ್ ಹಾಜಿ ರಾಜಧಾನಿ, ಯೂಸುಫ್ ಹಾಜಿ ಅರೆಯಲಡಿ, ಮಂಗಳ ಅಬೂಬಕ್ಕರ್ ಹಾಜಿ ಬೆಳ್ಳಾರೆ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಇಸ್ಮಾಯೀಲ್ ಹಾಜಿ ನೆಕ್ಕರೆ, ಇಬ್ರಾಹೀಂ ಹಾಜಿ ಮಂಡೆಕೋಲು, ಉಮ್ಮರ್ ಹಾಜಿ ಉಪ್ಪಿನಂಗಡಿ, ಶಂಸುದ್ದೀನ್ ಸುಳ್ಯ, ಎಲ್.ಟಿ. ರಝಾಕ್ ಹಾಜಿ ಪುತ್ತೂರು, ಹಮೀದ್ ಹಾಜಿ ಮಾಡಾವು, ಅಡ್ವ.ನೂರುದ್ದೀನ್ ಸಾಲ್ಮರ, ಎಂ.ಡಿ. ಹಸೈನಾರ್ ಮಾಡನ್ನೂರು, ಹಾಶೀರ್ ಪೆರಿಮಾರ್, ಎನ್. ಅಬ್ದುಲ್ ಖಾದರ್ ಮುಸ್ಲಿಯಾರ್ ಮಾಡನ್ನೂರು, ಎಂ.ಎಚ್. ಅಬ್ದುಲ್ ರಹ್ಮಾನ್ ಹಾಜಿ ದೇಲಂಪಾಡಿ, ತಾಜ್ ಮುಹಮ್ಮದ್ ಸಂಪಾಜೆ, ಮುಹಮ್ಮದ್ ಹಾಜಿ ಒಮೇಗಾ, ಮುಲಾರ್ ಅಬೂಬಕ್ಕರ್ ಹಾಜಿ, ಅಬೂಬಕ್ಕರ್ ಆರ್ಲಪದವು, ಹಮೀದ್ ಹಾಜಿ ಸುಳ್ಯ, ಬಶೀರ್ ನೆಲ್ಲಿಹುದಿಕೇರಿ, ಇಕ್ಬಾಲ್ ಶೀತಲ್, ನವಾಝ್ ಪರ್ಪುಂಜ, ನಾಸೀರ್ ಬೆಳ್ಳಾರೆ, ಹಸೈನಾರ್ ಹಾಜಿ ಗಂಡಿಬಾಗಿಲು, ಇಬ್ರಾಹೀಂ ಬಾತಿಷಾ ಪಾಟ್ರಕೋಡಿ, ಉಮ್ಮರ್ ಶಾಫಿ ಪಾಪೆತ್ತಡ್ಕ, ಸುದ್ದಿ ಬಿಡುಗಡೆ ವರದಿಗಾರ ಅಬೂಬಕ್ಕರ್ ಕೌಡಿಚ್ಚಾರ್, ಅಬ್ದುಲ್ ಸಲಾಂ ಪದಡ್ಕ, ಇಸ್ಹಾಕ್ ಹಾಜಿ ಪಡೀಲ್, ಸ್ವಾಲೀಹ್ ಹಾಜಿ ನೆಲ್ಲಿಹುದಿಕೇರಿ, ಇಕ್ಬಾಲ್ ಮಾಸ್ಟರ್ ಕುಶಾಲನಗರ, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಶಾಕೀರ್ ಅಲಕೆಮಜಲು, ಬಾತಿಷಾ ಕನಕಮಜಲು, ನೌಶಾದ್ ಮಲಾರ್, ಹಾಜಿ ಹನೀಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಸಂಸ್ಥೆಯ ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಷದಿ ಸ್ವಾಗತಿಸಿ, ರಶೀದ್ ಹಾಜಿ ಪರ್ಲಡ್ಕ ನಿರೂಪಿಸಿದರು.