ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನೀಟ್ ಸಿಇಟಿ ತರಗತಿಗಳ ಉದ್ಘಾಟನೆಯು ನಡೆಯಿತು.
ಈ ವಿಶೇಷ ತರಗತಿಗಳ ಉದ್ಘಾಟನೆಯನ್ನು ಸಂಸ್ಥೆಯ ಸಾಧಕ ಹಿರಿಯ ವಿದ್ಯಾರ್ಥಿ ಶ್ರೇಯಸ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಅತಿಥಿಯಾಗಿ ಆಗಮಿಸಿದ ತರಬೇತುದಾರರಾದ ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಕೆ ಮಾತನಾಡುತ್ತಾ “ವಿದ್ಯಾರ್ಥಿಗಳು ಶಿಸ್ತಿನಿಂದ ಆಧ್ಯಯನ ಮಾಡಿದಾಗ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಅದರಲ್ಲಿ ಜಯ ಸಾಧಿಸಬಹುದು. ನೀವೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಉತ್ತಮ ಭವಿಷ್ಯವನ್ನ ರೂಪಿಸುವಂತಾಗಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿ ಶ್ರೇಯಸ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಪರೀಕ್ಷೆಗಳನ್ನು ಎದುರಿಸಲು ತಾವು ಮಾಡಿದ ತಯಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ನೀಟ್ ಸಿಟಿ ತರಗತಿಗಳ ಸಂಯೋಜಕರಾದ ವಿಶ್ವೇಶ್ವರ ಎಂ ಸೇರಿದ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು. ವಿಜ್ಞಾನ ವಿಷಯದ ಉಪನ್ಯಾಸಕರು ವೇದಿಕೆಯಲ್ಲಿದ್ದರು.