ಯುವವಾಹಿನಿ ಪುತ್ತೂರು ಘಟಕದ ಪದ ಪ್ರದಾನ

0

ಪುತ್ತೂರು:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಪದ ಪ್ರದಾನ ಕಾರ್ಯಕ್ರಮವು ಡಿ.14ರಂದು ಅಪರಾಹ್ನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿರವರು ನೆರವೇರಿಸಿ ಮಾತನಾಡಿ, ಯುವವಾಹಿನಿ ಪುತ್ತೂರು ಘಟಕವು ಬಿಲ್ಲವ ಸಮುದಾಯದ ಅಭಿವೃದ್ಧಿಗೆ ಸದಾ ಶ್ರಮಿಸುತ್ತದೆ ಮಾತ್ರವಲ್ಲ ಬಿಲ್ಲವ ಸಂಘಕ್ಕೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಎರಡು ವರ್ಷ ಅವಿಭಜಿತ ಪುತ್ತೂರು ಕಡಬ ತಾಲ್ಲೂಕಿನ ಗ್ರಾಮ ಸಮಿತಿ ಸದಸ್ಯರಿಗೆ ಯಶಸ್ವಿ ಕ್ರೀಡಾಕೂಟವನ್ನು ಹಮ್ಮಿಕೊಂಡು ಗ್ರಾಮ ಸಮಿತಿ ನಡುವೆ ಬಾಂಧವ್ಯವನ್ನು ಸೃಷ್ಟಿಸಿದೆ ಎಂದು ಹೇಳಿ ಶುಭ ಹಾರೈಸಿದರು.


ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಅಮೈರವರು ಮಾತನಾಡಿ, ಘಟಕದಲ್ಲಿ ಉತ್ತಮ ಕಾರ್ಯಕ್ರಮ ಮೂಡಿ ಬಂದಿದ್ದು ಮುಂದಿನ ಅವಧಿಯಲ್ಲಿ ಇನ್ನಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ಮಾಡುವಂತಾಗಲಿ ಎಂದು ಹೇಳಿ ನೂತನ ತಂಡಕ್ಕೆ ಶುಭ ಹಾರೈಸಿದರು.


ಆಯ್ಕೆ ಪ್ರಕ್ರಿಯೆ:
2025-26ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ ಆಯ್ಕೆ ಪ್ರಕ್ರಿಯೆನ್ನು ಚುನಾವಣಾಧಿಕಾರಿಯಾದ ನಿಕಟಪೂರ್ವ ಅಧ್ಯಕ್ಷ ಜಯರಾಮ್ ಬಿ.ಯನ್‌ರವರು ನಡೆಸಿಕೊಟ್ಟರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್‌ರವರು ನೂತನ ತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು.


ಸನ್ಮಾನ:
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಸೊರಕೆ, ತಾಲೂಕು ಯುವ ಸಬಲೀಕರಣ ಕ್ರೀಡಾಧಿಕಾರಿ ಶ್ರೀಕಾಂತ್ ಬಿರಾವು, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು, ಯುವವಾಹಿನಿ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷ ಅಣ್ಣಿ ಪೂಜಾರಿರವರಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ ಮಾಜಿ ಅಧ್ಯಕ್ಷರಾದ ಜಯರಾಮ ಬಿ.ಎನ್, ಉಮೇಶ್ ಬಾಯಾರುರವರನ್ನು ಘಟಕದ ಪರವಾಗಿ ಸನ್ಮಾನಿಸಲಾಯಿತು.
ಪದ ಪ್ರದಾನ ಕಾರ್ಯಕ್ರಮದಲ್ಲಿ ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು, ಸರ್ವ ಸದಸ್ಯರು, ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು,ಪದಾಧಿಕಾರಿಗಳು, ನಿರ್ದೇಶಕರು, ಬಿಲ್ಲವ ಸಂಘ ಪುತ್ತೂರು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಪದಾಧಿಕಾರಿಗಳಿಗೆ, ಹಾಗೂ ನಿರ್ದೇಶಕರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನೂತನ ಕಾರ್ಯದರ್ಶಿ ದೀಕ್ಷಿತ್ ಇರ್ದೆ ವಂದಿಸಿದರು. ಗಣೇಶ್ ಬೊಳ್ಳಗುಡ್ಡೆ ಪ್ರಾರ್ಥಿಸಿ, ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.


ಸಹಕರಿಸಿದವರಿಗೆ ಕೃತಜ್ಞತೆಗಳು..
ನನ್ನ ಅವಧಿಯಲ್ಲಿ ನಡೆದಂತಹ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಿದ ಬಿಲ್ಲವ ಸಂಘದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳಿಗೆ, ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರುಗಳಿಗೆ, ಪದಾಧಿಕಾರಿಗಳಿಗೆ, ಸದಸ್ಯರಿಗೆ, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರುಗಳಿಗೆ, ಸದಸ್ಯರಿಗೆ ಧನ್ಯವಾದಗಳನ್ನು ಹೇಳುತ್ತಾ, ಮುಂದಿನ ನೂತನ ತಂಡದಿಂದ ಮುನ್ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮಿಂದಾಗುವ ಎಲ್ಲಾ ಸಹಕಾರವನ್ನು ಕೊಡುತ್ತೇನೆ.
-ಅಣ್ಣಿ ಪೂಜಾರಿ, ನಿಕಟಪೂರ್ವ ಅಧ್ಯಕ್ಷರು, ಯುವವಾಹಿನಿ ಪುತ್ತೂರು ಘಟಕ

ಸಹಕಾರ, ಪ್ರೋತ್ಸಾಹ ಅಗತ್ಯ..
ನೂತನ ಅಧ್ಯಕ್ಷರಾದ ಸಮಿತ್ ಪಿ. ಮಾತನಾಡಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಮ್ಮ ತಂಡವು ಉತ್ತಮ ಕೆಲಸ ಕಾರ್ಯವನ್ನು ಮಾಡಲು ಎಲ್ಲರ ಸಲಹೆ ಸೂಚನೆ ಸಹಕಾರ, ಪ್ರೋತ್ಸಾಹ ಅಗತ್ಯ. ನನ್ನಲ್ಲಿ ಭರವಸೆ ಇಟ್ಟು ಅಧ್ಯಕ್ಷರನ್ನಾಗಿ ಮಾಡಿದಕ್ಕೆ ನನ್ನ ಕೃತಜ್ಞತೆಗಳು.
-ಸಮಿತ್ ಪಿ, ನೂತನ ಅಧ್ಯಕ್ಷರು, ಯುವವಾಹಿನಿ ಪುತ್ತೂರು ಘಟಕ

LEAVE A REPLY

Please enter your comment!
Please enter your name here