ಪುತ್ತೂರು: 1978ರಲ್ಲಿ ಸ್ಥಾಪನೆಗೊಂಡ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಸಂಸ್ಥೆಯು ಸಂಸ್ಥೆಯ ಪ್ರೇರಕ ಸಂತರಾದ ಸೈಂಟ್ ಇಗ್ನೇಷಿಯಸ್ ಆಫ್ ಲೊಯೋಲಾರವರ ಹಬ್ಬವನ್ನು ಆಚರಿಸುತ್ತಿದ್ದು, ಈ ಪ್ರಯುಕ್ತ ದಿವ್ಯ ಬಲಿಪೂಜೆ ಹಾಗೂ ಹಿತೈಷಿಗಳ ಸಹಮಿಲನ ಕಾರ್ಯಕ್ರಮ ಜು.27 ರಂದು ಜರಗಲಿದೆ.
ಸಂಜೆ ಮಾಯಿದೆ ದೇವುಸ್ ಚರ್ಚ್ ನಲ್ಲಿ ದಿವ್ಯ ಬಲಿಪೂಜೆ ನೆರವೇರಲಿದ್ದು ಬಳಿಕ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಹಿತೈಷಿಗಳ ಸಹಮಿಲನ ಕಾರ್ಯಕ್ರಮ ಜರಗಲಿದೆ. ದಿವ್ಯ ಬಲಿಪೂಜೆಯನ್ನು ಮಂಗಳೂರಿನ ಸಂತ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ವಂ|ಪ್ರವೀಣ್ ಡಿ’ಸೋಜರವರು ನೆರವೇರಿಸಲಿರುವರು. ದಿವ್ಯ ಬಲಿಪೂಜೆ ಬಳಿಕ ನಡೆಯುವ ಸಹಮಿಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಲ್.ಸಿ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕ ರಾದ ಹಾಗೂ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ವಹಿಸಿಕೊಳ್ಳಲಿರುವರು.
ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ವಂ|ಪ್ರವೀಣ್ ಡಿ’ಸೋಜ, ಅನಿವಾಸಿ ಉದ್ಯಮಿ(ಪುತ್ತೂರು/ದುಬೈ) ಮೈಕಲ್ ಡಿ’ಸೋಜ, ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಆಲ್ವಿನ್ ಹೆನ್ರಿ ರೊಡ್ರಿಗಸ್, ಪುತ್ತೂರು ರೊಡ್ರಿಗಸ್ ಫಾರ್ಮ್ ಮಾಲಕ ಲ್ಯಾನ್ಸಿ ರೊಡ್ರಿಗಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ಭಾಗವಹಿಸಲಿರುವರು ಎಂದು ಸಂಸ್ಥೆಯ ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೊ, ಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.