ಗೌರವಾಧ್ಯಕ್ಷ: ಅಶೋಕ್ ರೈ, ಅಧ್ಯಕ್ಷ: ಮುರಳೀಧರ ರೈ, ಪ್ರ.ಕಾರ್ಯದರ್ಶಿ: ಲಕ್ಷ್ಮಿ ರೈ
ಪುತ್ತೂರು: ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಅಧ್ಯಕ್ಷರಾಗಿ ಎ.ಮುರಳೀಧರ ರೈ ಮಠಂತಬೆಟ್ಟು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ಆರ್. ರೈ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಜಯಪ್ರಕಾಶ್ ಬದಿನಾರು, ಡೆನ್ನಿಸ್ ಮಸ್ಕರೇನ್ಹಸ್, ಸಹ ಕಾರ್ಯದರ್ಶಿಗಳಾಗಿ ಶಿವಪ್ರಸಾದ್ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಬರಮೇಲು, ದಯಾನಂದ ಪಲ್ಲತ್ತಾರು, ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಕೃಷ್ಣಗಿರಿ, ವಿಕ್ರಂ ಶೆಟ್ಟಿ ಅಂತರ, ಸತೀಶ್ ನಾಯಕ್ ಮೋನಡ್ಕ, ರತ್ನಾಕರ ಪ್ರಭು ಕಂಜೂರು, ಗೌರವ ಸಲಹೆಗಾರರಾಗಿ ಹುಸೈನ್ ಕೆ.ಬಿ.ಕೆ, ಸುಬ್ರಹ್ಮಣ್ಯ ರೈ ರೈ ಎಸ್ಟೇಟ್ ಕೋಡಿಂಬಾಡಿ, ಪಿ.ಕೆ.ಎಸ್. ಗೌಡ ಪಿಲಿಗುಂಡ, ಅಶೋಕ್ ಆರಿಗ ಬಾರಿಕೆ, ಜಯಾನಂದ ಕೋಡಿ ಮತ್ತು ಡಾ. ಜಯಪ್ರಕಾಶ್ ಕೋಡಿ ಮೋನಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣರವರ ಮಾರ್ಗದರ್ಶನದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.