ಪುತ್ತೂರು: ಕಬಕದ ಕಾಯರ್ಬಲ್ಲಿ ಎಂಬಲ್ಲಿ ಹಾಸನದಿಂದ ಕೂರ್ನಡ್ಕದ KSBCL ಗೆ ಬರುತ್ತಿದ್ದ LEGEND ಕಂಪನಿಯ ಬಿಯರ್ ಲೋಡ್ ಹೊತ್ತ KA 29 C 1252 ಟಾಟಾ ಲಾರಿಯ ENGINE ನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಲಾರಿಯ ಕ್ಯಾಬಿನ್ ಒಳಗಡೆ ಸಂಪೂರ್ಣ ಸುಟ್ಟು ಹೋಗಿದೆ. ಆದರೆ ಬಿಯರ್ ಬಾಕ್ಸ್ ಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಸಾರ್ವಜನಿಕರು ಹಾಗೂ ಅಗ್ನಿಶಾಮಕದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು. ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
