ಆರೋಗ್ಯ ಕೆಡುವ ಮೊದಲು ಎಚ್ಚರ ವಹಿಸಿ – ಚಂದ್ರಶೇಖರ ಪೇರಾಲು
ಆಯುರ್ವೇದ ಪರಿಸರ ಮಕ್ಕಳ ಬೆಳವಣಿಗೆಗೆ ಪೂರಕ – ಡಾ.ಪ್ರಮೋದ್
ಸಮತೋಲನ ಆಹಾರ, ನಿದ್ದೆ ಆರೋಗ್ಯಕ್ಕೆ ಅಗತ್ಯ – ವೆಂಕಟ್ರಮಣ ಕಳುವಾಜೆ
ಪುತ್ತೂರು: ಭಾರತೀಯ ಮೌಲ್ಯಗಳನ್ನು ಎಳವೆಯಲ್ಲಿ ನೀಡುವ ನಿಟ್ಟಿನಲ್ಲಿ ಹಲವು ಚಟುವಟಿಕೆಗಳನ್ನು ನಿರಂತರ ಮಾಡಿಕೊಂಡು ಬರುತ್ತಿರುವ ಮೂಲಕ ಹಲವು ಪ್ರಥಮಗಳಿಗೆ ಕಾರಣವಾದ ಬನ್ನೂರಿನ ಕೃಷ್ಣನಗರ ಸಮೀಪದ ಅಲುಂಬುಡದಲ್ಲಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು, ಆಸ್ಪತ್ರೆ, ಕುರುಂಜಿಬಾಗ್ ಸುಳ್ಯ ಹಾಗು ಕೆ.ವಿ.ಜಿ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜು.27ರಂದು ಸಂಸ್ಥೆಯ ವಠಾರದಲ್ಲಿ ನಡೆದ ಬೃಹತ್ ವೈದ್ಯಕೀಯ ಶಿಬಿರ ನಡೆಯಿತು.

ಸುಳ್ಯ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಚಂದ್ರಶೇಖರ್ ಪೆರಾಲ್ ಅವರು ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿ ನಮ್ಮ ಲೈಫ್ ಸ್ಟೈಲ್ ನಿಂದಾಗಿ ಪ್ರತಿ ಮನೆಯಲ್ಲೂ ಮೆಡಿಕಲ್ ರೂಮ್ ಇರುವುದು ದುರಂತ. ಹಾಗಾಗಿ ಆರೋಗ್ಯ ಹಾಳಾಗುವ ಮೊದಲು ನಾವು ಯೋಚನೆ ಮಾಡಿ ಸರಿಯಾದ ಔಷಧಿ ಬಳಸಬೇಕು. ಆರೋಗ್ಯವೇ ಭಾಗ್ಯ. ಇದಕ್ಕಿಂತ ಮಿಗಿಲಾದುದು ಯಾವುದೂ ಇರಲಾರದು. ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಕಲೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಇತ್ಯಾದಿಗಳೆಲ್ಲವೂ ಆರೋಗ್ಯದ ಮೇಲೆ ನೇರ ಅಥವಾ ಪರೋಕ್ಷ ಪರಿಣಾಮ ಬೀರುತ್ತಲೇ ಇರುತ್ತವೆ. ಆದರೆ ಇವತ್ತು ಕಾಲ ಬದಲಾಗಿದೆ. ನಮ್ಮ ಲೈಫ್ ಸ್ಟೈಲ್ ನಿಂದಾಗಿ ಪ್ರತಿ ಮನೆಯಲ್ಲೂ ಮೆಡಿಕಲ್ ರೂಮ್ ಇದೆ. ದುರಂತವೆಂದರೆ ಸಣ್ಣ ಮಕ್ಕಳಿಗೂ ಕ್ಯಾನ್ಸರ್, ಹೃದಯಾಘಾತ ಹೆಚ್ಚಾಗುತ್ತಿದೆ ಎಂದ ಅವರು ಆರೋಗ್ಯ ಹಾಳಾಗುವ ಮೊದಲು ನಾವು ಯೋಚನೆ ಮಾಡಿ ಸರಿಯಾದ ಔಷಧಿ ಬಳಸಬೇಕು. ವಾಹನಗಳಿಗೆ ಸರ್ವಿಸ್ ಮಾಡಿದಂತೆ ನಮ್ಮ ದೇಹದ ಮೆಷಿನ್ ಗೂ ಉತ್ತಮ ವೈದ್ಯಕೀಯ ತಪಾಸಣೆ ಮಾಡುವುದು ಉತ್ತಮ ಎಂದರು.
ಆಯುರ್ವೇದ ಪರಿಸರ ಮಕ್ಕಳ ಬೆಳವಣಿಗೆಗೆ ಪೂರಕ:
ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಡಾ.ಪ್ರಮೋದ್ ಅವರು ಮಾತನಾಡಿ ಆರೋಗ್ಯವಂತನ ಮನುಷ್ಯನ ಆರೋಗ್ಯ ಕಾಪಾಡುವ ವ್ಯವಸ್ಥೆ ಮಾಡಲು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ನಿತ್ಯ ಕೆಲಸ ಆರಂಭಿಸಬೇಕೆಂದರು. ಪುತ್ತೂರಿನ ಎವಿಜಿ ಶಿಕ್ಷಣ ಸಂಸ್ಥೆಯ ವಠಾರದ ಸುತ್ತ ಗಿಡಮರಗಳು ಅಯುರ್ವೇದ ಪರಿಸರವಾಗಿದೆ. ಇದು ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಸಮತೋಲನ ಆಹಾರ, ನಿದ್ದೆ ಆರೋಗ್ಯಕ್ಕೆ ಅಗತ್ಯ:
ಶಿಬಿರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಮಾತನಾಡಿ ಹಸಿವೆಯಾದಾಗ ಊಟ ಮಾಡಿ, ನಿದ್ದೆ ಬಂದಾಗ ನಿದ್ದೆ ಮಾಡಿ ಎಂದ ಅವರು ಸಮತೋಲನ ಆಹಾರ ನಿದ್ದೆಯಿಂದ ಆರೋಗ್ಯ ಕಾಪಾಡಿ ಎಂದರು.
ಎವಿಜಿ ಇಂಗ್ಲಿಷ್ ಮಿಡಿಯಂ ಶಾಲೆಯ ನಿರ್ದೆಶಕರಾಗಿರುವ ನಗರಸಭೆ ಸದಸ್ಯೆ ಗೌರಿ ಬನ್ನೂರು, ಬನ್ನೂರು ಗ್ರಾ.ಪಂ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷ ದಯಾನಂದ ಗೌಡ, ಬನ್ನೂರು ಸ್ಪೂರ್ತಿ ಯುವಕ ಮಂಡಲದ ಸಂಚಾಲಕ ದಿನೇಶ್ ಸಾಲಿಯಾನ್, ಕೃಷ್ಣನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ, ಎ.ವಿ.ಜಿ. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ, ಕೆ ವಿ ಜಿ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯಾಧಿಕಾರಿ ಸುಳ್ಯದ ಡಾ ವಿಜಯಲಕ್ಷ್ಮೀ, ಬನ್ನೂರು ಗ್ರಾಮದ ನಮ್ಮ ಕ್ಲೀನಿಕ್ ನ ವೈದ್ಯಾಧಿಕಾರಿ ಡಾ ಮಲ್ಲಿಕಾರ್ಜುನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಸೀತಾರಾಮ ಕೇವಳ, ಸೀತಾರಾಮ ಪೂಜಾರಿ ಮೇಲ್ಮಜಲು, ಪುಷ್ಪಾವತಿ ಗೌಡ ಕಳುವಾಜೆ, ಗಂಗಾದರ ಗೌಡ, ಸೀತಾರಾಮ ಪೂಜಾರಿ, ಉಪ ಪ್ರಾಂಶುಪಾಲೆ ಸವಿತಾ ಅತಿಥಿಗಳನ್ನು ಗೌರವಿಸಿದರು. ಚಂದ್ರಿಕಾ ಪ್ರಾರ್ಥಿಸಿದರು.
ಎವಿಜಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ನ ಸಂಚಾಲಕ ಎ ವಿ ನಾರಾಯಣ ಅವರು ಸ್ವಾಗತಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ವಂದಿಸಿದರು.
ಶಿಕ್ಷಕಿಯರಾದ ರಾಧಾ, ಯಶುಬಾ ರೈ ಕಾರ್ಯಕ್ರಮ ನಿರೂಪಿಸಿದರು.ಎವಿಜಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ನ ಪ್ರಾಂಶುಪಾಲ ಅಮರನಾಥ್ ಬಿ.ಪಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ್ ಕೆಮ್ಮಾಯಿ ಅವರು ಶಿಬಿರಾರ್ಥಿಗಳಿಗೆ ಟೂತ್ ಪೇಸ್ಟ್ ವಿತರಿಸಿದರು. ಎವಿಜಿ ಶಾಲೆಯ ನಿರ್ದೇಶಕರಾದ ಕೊರಗಪ್ಪ ಗೌಡ, ಪುಷ್ಪಾವತಿ ಗೌಡ ಕಳುವಾಜೆ, ಗಂಗಾಧರ ಗೌಡ ಬನ್ನೂರು, ಸೀತಾರಾಮ ಕೇವಳ, ಕೆವಿಜಿ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಘುಪತಿ , ವಿನಯ ಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.