ಪುತ್ತೂರು: ಭಾರಿ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಜು.26ರಂದು ಸಂಜೆ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ. ಅಜ್ಜಿಕಲ್ಲು ನಿವಾಸಿ ರುಕಿಯಾ ಅಬ್ಬಾಸ್ ಎಂಬವರ ಮನೆಗೆ ಮರ ಬಿದ್ದಿರುವುದರಿಂದ ಮನೆಯ ಪಕ್ಕಾಸು ಮುರಿದಿದ್ದು ಹೆಂಚುಗಳು ಹುಡಿಯಾಗಿವೆ. ಮನೆಗೆ ಭಾಗಶಃ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
