ಪುತ್ತೂರು: ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರು ನಡೆದಾಡಿದ ಪುಣ್ಯ ಭೂಮಿ, ಶ್ರೀ ರಾಮ ಲಕ್ಷ್ಮಣರು ಅಡ್ಡಾಡಿದ ವೀರಭೂಮಿ ಎಂದೇ ಕರೆಸಿಕೊಂಡಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲುವಿನಲ್ಲಿ ಕಾರಣಿಕತೆ ಮೆರೆಯುತ್ತಿರುವ ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ಜು .29 ರಂದು ವಿಜೃಂಭಣೆಯ ನಾಗರ ಪಂಚಮಿ ಆಚರಣೆ ನಡೆಯಲಿದೆ.
ಬೆಳಿಗ್ಗೆ ಶ್ರೀ ನಾಗದೇವರಿಗೆ ಸಿಯಾಳಭಿಷೇಕ ಹಾಗೆ ಹಾಲಿನ ಅಭಿಷೇಕ ನಡೆಯಲಿದೆ. ನಾಗರ ಪಂಚಮಿಯ ಪುಣ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶ್ರೀ ನಾಗ ದೇವರ ಗಂಧ ಪ್ರಸಾದ ಸ್ವೀಕರಿಸುವಂತೆ ಶ್ರೀ ಗರಡಿಯ ಆಡಳಿತ ಮೊಕ್ತಸರ ಕೆ.ಸಂಜೀವ ಪೂಜಾರಿ ಕೂರೇಲು ತಿಳಿಸಿದ್ದಾರೆ.
