ಆಲಂಕಾರು: ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ತಾಳಮದ್ದಳೆಯ 10ನೇ ಸೇವೆ ಜು.26ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಂಜೆ ಮಯೂರ ಸಾಂಸ್ಕೃತಿಕ ಕಲಾ ಕೇಂದ್ರ ಆಲಂಕಾರು ಇದರ ವಿದ್ಯಾರ್ಥಿಗಳಿಂದ ’ಕದಂಬ ಕೌಶಿಕೆ ’ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕೃಷ್ಣ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ರಚನ್ ಕುಮಾರ್ ಕಾಂಚನ, ಮುಮ್ಮೆಳದಲ್ಲಿ ಆಶ್ಲೇಷ್ (ದೇವೇಂದ್ರ), ತೇಜಸ್ವಿನಿ (ಶುಂಭ), ಕೌಶಿಕ್ (ದೂತ), ದೀಕ್ಷಾ (ದೇವಿ 1), ಅಭೀಕ್ಷಾ, ಯಶ್ವಿತಾ (ಚೆಂಡ-ಮುಂಡರು), ಸಿಂಚನಾ (ಸುಗ್ರೀವ), ಪಂಚಮಿ (ರಕ್ತಬೀಜ 1), ಬೆನಕೇಶ್ ಕುಮಾರ್ (ದೇವಿ 2), ಭಾಮಿನಿ (ರಕ್ತಬೀಜ 2) ಸಹಕರಿಸಿದರು.

ನಂತರ ಕಲಾಸಂಗಮದ ಕಲಾವಿದರಿಂದ ’ಸೀತಾಪಹಾರ’ ತಾಳಮದ್ದಳೆ ನಡೆಯಿತು. ಮುಮ್ಮೇಳದಲ್ಲಿ ದಿವಾಕರ ಆಚಾರ್ಯ ಹಳೆನೇರೆಂಕಿ (ರಾವಣ ), ಹೇಮಂತ್ ರೈ ಮನವಳಿಕೆ (ಮಂಡೋದರಿ), ಅಮ್ಮಿ ಗೌಡ ನಾಲ್ಗುತ್ತು (ಮಾರೀಚ), ನಾರಾಯಣ ಭಟ್ ಆಲಂಕಾರು (ರಾಮ), ರಾಮ್ ಪ್ರಸಾದ್ ಆಲಂಕಾರು (ಸೀತೆ 1), ರಾಮ್ ಪ್ರಕಾಶ್ ಕೊಡಂಗೆ (ಲಕ್ಷ್ಮಣ), ದೀಕ್ಷಾ ಪಿ.ಕೆ. (ಸೀತೆ 2), ಗುರುಪ್ರಸಾದ್ ಆಲಂಕಾರು (ಸನ್ಯಾಸಿ ರಾವಣ), ರಾಘವೇಂದ್ರ ಭಟ್ ತೋಟಂತಿಲ (ಸೀತೆ 3), ಹರಿಶ್ಚಂದ್ರ ಗೌಡ ಕೋಡ್ಲ (ಜಟಾಯು) ಸಹಕರಿಸಿದರು.
ಮಯೂರ ಸಾಂಸ್ಕೃತಿಕ ಕಲಾ ಕೇಂದ್ರ ಆಲಂಕಾರು ಮತ್ತು ಶ್ರೇಯಾ ರಾವ್ ಶರವೂರು ಸೇವಾರ್ಥಿಗಳಾಗಿ ಸಹಕರಿಸಿದರು. ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಸೇವಾ ಪ್ರಸಾದವನ್ನು ನೀಡಲಾಯಿತು. ವಿಶೇಷವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೇಮಂತ್ ಕುಮಾರ್ ರೈ ಮನವಳಿಕೆ ಮೊದಲ ಬಾರಿಗೆ ಮಂಡೋದರಿಯ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಗಮನ ಸೆಳೆದರು.
ಕಲಾಸಂಗಮದ ಕಾರ್ಯದರ್ಶಿ ದಿವಾಕರ ಆಚಾರ್ಯ ಹಳೆನೇರೆಂಕಿ ಸ್ವಾಗತಿಸಿ, ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ದೇವಸ್ಥಾನದ ಸಿಬ್ಬಂದಿ ವರ್ಗದವರು, ಮಕ್ಕಳ ಪೋಷಕರು ಮತ್ತು ಭಕ್ತರು ಉಪಸ್ಥಿತರಿದ್ದರು.