ನೆಲ್ಯಾಡಿ: ಜು.26ರಂದು ಬೀಸಿದ ಗಾಳಿ ಹಾಗೂ ಮಳೆಗೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ಅನಿಲ ನಿವಾಸಿ ಸುಮಿತ್ರ ಎಂಬವರ ಮನೆಗೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಅಲ್ಲದೆ ಗಾಳಿಗೆ ಕೊಟ್ಟಿಗೆ ಮೇಲ್ಛಾವಣಿಗೆ ಹಾಕಿದ್ದ ಸೀಟ್ ಹಾರಿ ಹೋಗಿದ್ದು ಅಪಾರ ನಷ್ಟವಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
