1.03 ಕೋಟಿ ರೂ.ಲಾಭ, ಶೇ.25 ಡಿವಿಡೆಂಡ್; ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ
ಪುತ್ತೂರು; ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಜು.27ರಂದು ಆಲಂಕಾರಿನಲ್ಲಿರುವ ಸಂಘದ ಪ್ರಧಾನ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮಾತನಾಡಿ, 2024-25ನೇ ಸಾಲಿನಲ್ಲಿ ಸಂಘವು 250.16 ಕೋಟಿ ರೂ.ವ್ಯವಹಾರ ನಡೆಸಿ ರೂ 1.03 ಕೋಟಿ ಲಾಭ ಗಳಿಸಿದೆ. ಲಾಭಾಂಶವನ್ನು ಸಹಕಾರಿ ಸಂಘದ ನಿಬಂಧನೆಯಂತೆ ಹಂಚಿಕೆ ಮಾಡಲಾಗಿದ್ದು ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. 1991ರಲ್ಲಿ ಸಂಘ ಪ್ರಾರಂಭಗೊಂಡು 2005ರಿಂದ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ. ಪ್ರಾರಂಭದಲ್ಲಿ ರೂ 2.30 ಲಕ್ಷ ಮೂಲ ಬಂಡವಾಳದೊಂದಿಗೆ ವ್ಯವಹಾರ ಆರಂಭಿಸಿದ ಈ ಸಂಘವು 2024-25ನೇ ಸಾಲಿನ ವರ್ಷಾಂತ್ಯಕ್ಕೆ ಒಟ್ಟು 1408 ಎ ತರಗತಿ ಸದಸ್ಯರನ್ನು ಹೊಂದಿದ್ದು, ರೂ 37 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಆಲಂಕಾರಿನಲ್ಲಿ ಸ್ವಂತ ನಿವೇಶನದಲ್ಲಿರುವ ಬೈದಶ್ರೀ ಸಹಕಾರ ಸೌಧದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಡಬ, ನೂಜಿಬಾಳ್ತಿಲ-ಕಲ್ಲುಗುಡ್ಡೆ, ನೆಟ್ಟಣ ಮತ್ತು ಕೊಯಿಲದಲ್ಲಿ ಬ್ಯಾಂಕಿಂಗ್ ವ್ಯವಹಾರದ ಶಾಖೆಗಳಿವೆ. ಎಲ್ಲಾ ಶಾಖೆಗಳಲ್ಲೂ ಉತ್ತಮ ವ್ಯವಹಾರವಿದೆ. 2024-25ನೇ ಸಾಲಿನಲ್ಲಿ ಶೇ 98.14 ಸಾಲ ವಸೂಲಾತಿಯಾಗಿದ್ದು ಲೆಕ್ಕಪರಿಶೋಧನೆಯಲ್ಲಿ ’ಎ’ ವರ್ಗೀಕರಣ ಪಡೆದುಕೊಂಡಿದೆ. ವ್ಯವಹಾರದಲ್ಲಿ ಸತತ 3 ವರ್ಷಗಳಿಂದ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸಂಘದಲ್ಲಿ 97 ಸ್ವ-ಸಹಾಯ ಸಂಘಗಳಿದ್ದು, ಸ್ವಸಹಾಯ ಸಂಘಗಳು ವ್ಯವಹಾರ ನಡೆಸಿದ ಗತ 3 ವರ್ಷದ ಲಾಭಾಂಶ ರೂ.16.16 ಲಕ್ಷವನ್ನು ಗುಂಪಿನ ಸದಸ್ಯರಿಗೆ ನೀಡಲಾಗಿದೆ. ಜೊತೆಗೆ 1.74 ಲಕ್ಷ ರೂ ಮೌಲ್ಯದ ಉಡುಗೊರೆ ನೀಡಲಾಗಿದೆ ಎಂದರು.
ಶೀಘ್ರದಲ್ಲಿ ಬೆಳ್ಳಾರೆ ಶಾಖೆ:
ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾಮಟ್ಟಕ್ಕೆ ವಿಸ್ತರಿಸಿ ಬೈಲಾ ತಿದ್ದುಪಡಿ ಮಾಡಿಕೊಂಡು ಇಲಾಖಾನುಮೋದನೆ ಪಡೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಬೆಳ್ಳಾರೆಯಲ್ಲಿ ಶಾಖೆ ಆರಂಭಿಸಲಾಗುವುದು. ಇದಕ್ಕೆ ಬೇಕಾದ ಸಿದ್ಧತೆಯೂ ಮಾಡಿಕೊಳ್ಳಲಾಗಿದೆ. ಮುಂದೆ ನಿಂತಿಕಲ್ಲುನಲ್ಲಿಯೂ ಶಾಖೆ ತೆರೆಯಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಔಷದಿ ಸಿಂಪಡಿಸುವ ಫೈಬರ್ ದೋಟಿ ಖರೀದಿಸಲು ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಸದಸ್ಯರ ಬೇಡಿಕೆಯಂತೆ ಸ್ಥಳೀಯ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರವೂ ಆಯೋಜಿಸಲಾಗುವುದು. ಸದಸ್ಯರ ಸಹಕಾರದಿಂದ ಸಂಘವು ಚೈತನ್ಯ ರೂಪದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.
ಅತ್ಯುತ್ತಮ ಶಾಖೆಗೆ ಗೌರವಾರ್ಪಣೆ;
2024-25ನೇ ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದ ನೆಟ್ಟಣ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಂತೋಷ್ಕುಮಾರ್ ಬಿಳಿನೆಲೆ ಹಾಗೂ ಶಾಖಾ ವ್ಯವಸ್ಥಾಪಕ ಮಿಥುನ್ ಸುಂದರ್ ಮತ್ತು ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಕುಸುಮಾಧರ ಎನ್ಕಾಜೆ ಹಾಗೂ ಶಾಖಾ ವ್ಯವಸ್ಥಾಪಕಿ ಶರ್ಮಿಳಾ ಎನ್.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಲಹಾ ಸಮಿತಿ ಸದಸ್ಯರು, ಶಾಖಾ ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ;
ಸಂಘದ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಅಧಿಕ ಅಂಕ ಪಡೆದುಕೊಂಡ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಪೂರ್ಣೇಶ್, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಗ್ರೀಷ್ಮಾ ಪಿ., ಪಿಯುಸಿ ಕಲಾ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಕಾವ್ಯಶ್ರೀ, ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ನಿಶ್ಮಿತಾ, ರಕ್ಷಿತಾ, ವಾಣಿಜ್ಯ ವಿಭಾಗದಲ್ಲಿ ಆತೂರು ಆಯಿಶಾ ಪ.ಪೂ.ಕಾಲೇಜಿನ ಮೈಮುನಾ ಲವೀಝಾ ನೂನ, ವಿಜ್ಞಾನ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಶ್ರೇಯಸ್, ಕಡಬ ಸೈಂಟ್ ಜೋಕಿಮ್ಸ್ ಪ.ಪೂ.ಕಾಲೇಜಿನ ಶಬರೀಶ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೂರ್ತೆದಾರ ಸದಸ್ಯರಿಗೆ ಪ್ರೋತ್ಸಾಹಧನ, ಕಡ್ಡಾಯ ಠೇವಣಿ ವಿತರಣೆ ಮಾಡಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಕರ್ಕೇರ ಮತ್ರಾಡಿ, ಮಾಜಿ ನಿರ್ದೇಶಕರಾದ ಬಿ.ಕೆ.ಸುಂದರ ಆಲಂಕಾರು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಸಂಜೀವ ಪೂಜಾರಿ ಬಟ್ಲಡ್ಕ, ಜಿನ್ನಪ್ಪ ಸಾಲಿಯಾನ್ ಕಡಬ, ವಸಂತ ಪೂಜಾರಿ ಬದಿಬಾಗಿಲು, ಜನಾರ್ದನ ಬಿ.ಎಲ್., ಶ್ರೀಧರ ಪೂಜಾರಿ ತುಂಬೆತ್ತಡ್ಕ, ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಭಾಸ್ಕರ ಬರೆಂಬೆಟ್ಟು, ಸಂಘದ ಸದಸ್ಯರಾದ ಉದಯ ಸಾಲ್ಯಾನ್, ಮಾಧವ ಪೂಜಾರಿ ಕಯ್ಯಪೆ, ಸುಚೇತಾ ಬರೆಂಬೆಟ್ಟು, ರವಿ ಕುಂಞಿಲಡ್ಡ, ಪುರುಷೋತ್ತಮ ಪೂಜಾರಿ ಬರೆಂಬೆಟ್ಟು, ಅಶೋಕ್ ಕೊಯಿಲ, ಮೋನಪ್ಪ ಪೂಜಾರಿ ಕರ್ಮಾಯಿ, ಸುಂದರ ಕರ್ಕೇರ ಮತ್ರಾಡಿ, ಸಂಜೀವ ಪೂಜಾರಿ ನೈಲ, ಸುಧಾಕರ ಪೂಜಾರಿ ಕಲ್ಲೇರಿ ಸಹಿತ ಶಾಖಾ ಸಲಹಾ ಸಮಿತಿ ಸದಸ್ಯರು, ಸಂಘದ ಸದಸ್ಯರು ಮಹಾಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ನಿರ್ದೇಶಕರಾದ ಕೆ.ಜಯಕರ ಪೂಜಾರಿ ಕಲ್ಲೇರಿ, ಸಂತೋಷ್ಕುಮಾರ್ ಮತ್ರಾಡಿ, ಗಂಗಾರತ್ನವಸAತ್ ಅಗತ್ತಾಡಿ, ಜಯಂತಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ವಾರ್ಷಿಕ ವರದಿ ವಾಚಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ಕುಮಾರ್ ಅಗತ್ತಾಡಿ, ಶಾಖಾ ವ್ಯವಸ್ಥಾಪಕ ಮಿಥುನ್ ಸುಂದರ್, ಕಿರಿಯ ಗುಮಾಸ್ತ ಗೀತೇಶ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸ್ವಾತಿ, ಚೈತನ್ಯ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕರಾದ ರಂಜಿನಿ ಆರ್., ರಕ್ಷಿತ್ ಎ., ಶಿಲ್ಪಾ ಕೆ.ಎಸ್., ಸಿಬ್ಬಂದಿಗಳಾದ ಶರ್ಮಿಳಾ, ಸಚಿನ್ ಎಸ್.ಸಿ., ಕೀರ್ತನ್ಕುಮಾರ್ ಎ., ದೀಕ್ಷಿತ್ ಕೆ., ಅನಿಲ್ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಾಹಕರಾದ ಎಸ್.ರಾಮಚಂದ್ರ ನೈಯ್ಯಲ್ಗ, ಎನ್.ಧನಂಜಯ ನೈಯ್ಯಲ್ಗ, ಶರತ್ಕುಮಾರ್ ಬಿ.ಎಸ್., ಶಶಿಧರ ಆರ್.ಕೆ., ಅಜಯ್ಕುಮಾರ್ ಕೆ.ಆರ್., ರೋಹಿಣಿ ಎಸ್.ವಾಲ್ತಾಜೆ, ಚರಣ್ ವಿ.ಬಿ., ವಿನೀತಾ ಓ.ಡಿ., ಕೌಶಿಕ್ ಸಹಕರಿಸಿದರು.
1.05 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ;
ಸಂಘದ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 54 ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಒಟ್ಟು 1.05 ಲಕ್ಷ ರೂ.ವಿದ್ಯಾರ್ಥಿ ವೇತನ ಮಹಾಸಭೆಯಲ್ಲಿ ವಿತರಣೆ ಮಾಡಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ, ಸಂಘದ ಮೂರ್ತೆದಾರರ ಮಕ್ಕಳಿಗೆ, ಸರಕಾರಿ ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು. ಅಲ್ಲದೇ ದತ್ತಿನಿಧಿ ವಿದ್ಯಾರ್ಥಿ ವೇತನ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.