ಬಡಗನ್ನೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ದ್ವಿತೀಯ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ವು ಜು.27ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರ, `ಡಾ| ರಮಾ ಕೆ.ಟಿ. ಭಂಡಾರಿ ಪೇರಾಲು ವೇದಿಕೆ ಮುಂಭಾಗದ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ರೖೆ ಕುದ್ಕಾಡಿ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಇತಿಹಾಸ ಪ್ರಸಿದ್ಧವಾದ ಕ್ಷೇತ್ರ ಪಡುಮಲೆ ತುಳುನಾಡಿನ ಐತ್ಯಗಳ ಪರಂಪರೆ ನಾಡು.ಇಲ್ಲಿನ ಯುವಕರು ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಆದು ಇತರ ಗ್ರಾಮಾಗಳಿಗೆ ಆದರ್ಶದಾಯಕ ಕಾರ್ಯಕ್ರಮವಾಗಿರುವುದು ಸಂತೋಷಕರ ವಿಚಾರ. ಮುಂದೆಯೂ ಇನ್ನಷ್ಟು ಉತ್ತಮ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಹೇಳಿ ಕಾರ್ಯಕ್ರಮ ಶುಭ ಹಾರೖೆಸಿದರು.
ತುಳು ಹಾಸ್ಯ ಕಲಾವಿದ ರವಿ ರಾಮಕುಂಜ ತೆಂಗಿನ ಹಿಂಗಾರ ಅರಳಿಸಿ ಉದ್ಘಾಟಿಸಿ, ಕಾರ್ಯಕ್ರಮ ಶುಭ ಹಾರೖೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ, ಅಧ್ಯಕ್ಷ ಸತೀಶ್ ರೈ ಕಟ್ಟಾವು ರವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಸರ್ಡ್ ಒಂಜಿ ದಿನ ದ್ವಿತೀಯ ವರ್ಷದ ಕಾರ್ಯಕ್ರಮ ಉತ್ತಮ ಕಾರ್ಯಕ್ರಮ ಸಂತೋಷ ತಂದಿದೆ. ಜೀವನದಲ್ಲಿ ಸಿಹಿ ಮತ್ತು ಕಹಿ ಭಾವನೆಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಜೀವನದಲ್ಲ ಯಶಸ್ವಿಗೊಳ್ಳಲು ಸಾಧ್ಯವಿದೆ. ತುಳುನಾಡಿನ ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ದಾರಿ ದೀಪವಾಗಲು ಇಂತಹ ಕಾರ್ಯಕ್ರಮ ಅವಶ್ಯಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಬಿ. ಮಹಾಲಿಂಗ ಭಟ್, ಕೃಷ್ಣಪ್ರಸಾದ್ ರೈ, ಪಡುಮಲೆ, ಬಾಳಿಲ ಗ್ರಾ. ಪಂ ಕಾರ್ಯದರ್ಶಿ ಜಯಶೀಲ ರೈ ಬಡಕ್ಕಾಯೂರು, ಗಣೇಶೋತ್ಸವ ಸಮಿತಿ, ಗೌರವ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಡ, ಉಪಾಧ್ಯಕ್ಷ ರಾಜೇಶ್ ರೈ ಮೇಗಿನಮನೆ, ಬಡಗನ್ನೂರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೖೆ ಪಳ್ಳತ್ತಾರು ಪಡುಮಲೆ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ:-
ಪ್ರತಿಭೆಯನ್ನು ಅನಾವರಣ ಜೊತೆಗೆ ಹಿಂದೂ ಸಮಾಜದ ಒಗ್ಗೂಡಿಸುವ ಕೆಲಸ ಆಗಲಿ ಅರುಣ್ ಕುಮಾರ್ ಪುತ್ತಿಲ
ಸಮಾರೋಪ ಸಮಾರಂಭದ ಮುಖ್ಯ ಅತಿಗಳಾಗಿ ಆಗಮಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದಿನ ಸಂಪ್ರದಾಯವನ್ನು ಉಳಿಸಿಕೊಂಡು ಬರಬೇಕು. ಅನಾದಿ ಕಾಲದ ಪರಂಪರೆ ಉಳಿಸಿಕೊಂಡು ಸಮಾಜವನ್ನು ಸಂಘಟಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಸಂಪ್ರದಾಯ ಮತ್ತು ಜೀವನ ಪದ್ಧತಿ ಮತ್ತೆ ನೆನಪಿಸುವ ಕೆಲಸ ಆಗಬೇಕು.ಸಂಸ್ಕೃತಿ ಮತ್ತು ಜೀವನ ಪದ್ಧತಿ ಉಳಿಸುವ ಮೂಲಕ ದೇಶದ ಗೌರವ ಹೆಚ್ಚಿಸುವ ಕೆಲಸ ನಡೆಯಲಿ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಜೊತೆಗೆ ಹಿಂದೂ ಸಮಾಜದ ಒಗ್ಗೂಡಿಸುವ ಕೆಲಸ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುತ್ತಿದೆ ಎಂದು ಹೇಳಿ ಕಾರ್ಯಕ್ರಮ ಅಯೋಜಿಸಿದ ಸಂಘಟಕರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸುವ್ಯವಸಿತ ಸಂಘಟನೆ : ವಿಜಯ ಸಾಮ್ರಾಟ್, ಸ್ಥಾಪಕಾಧ್ಯಕ್ಷ ಸಹಜ್ ರೈ, ಬಳಜ್ಜ
ಗ್ರಾಮೀಣ ಪ್ರದೇಶದಲ್ಲಿ ಸುವ್ಯವಸಿತವಾಗಿ ಕಾರ್ಯಕ್ರಮ ಆಯೋಜನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಸಹಜ್ ರೖೆ ಕಳೆದ ಭಾರಿಯು ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮೂಡಿಬಂದಿದೆ ಈ ಭಾರಿಯು ಉತ್ತಮ ರೀತಿಯಲ್ಲಿ ಆರೋಗ್ಯಕರ ಕ್ರೀಡೆ ಆಯೋಜನೆಗೊಂಡಿದೆ ಎಂದು ಹೇಳಿ ಶುಭ ಹಾರೖೆಸಿದರು.
ಮನರಂಜನೆಯೊಂದಿಗೆ ವ್ಯಾಯಾಮ: ಹೇಮನಾಥ ಶೆಟ್ಟಿ ಕಾವು
ಪಡುಮಲೆ ಈ ಪ್ರದೇಶಕ್ಕೆ ತನ್ನದೇ ಆದ ವೖೆಶಿಷ್ಟವಿದೆ. ಹಿಂದಿನ ಕಾಲದಲ್ಲಿ ಹಿರಿಯರು ಬೇಸಾಯ ಮಾಡುತ್ತಿದ್ದರು. ಆ ಸಂಧರ್ಭದಲ್ಲಿ ಮಕ್ಕಳಿಗೆ ಕ್ರೀಡೆಗೆ ಅವಕಾಶವಿರಲಿಲ್ಲ. ಮತ್ತು ಯಾವುದೇ ಕ್ರೀಡೆಗೂ ಅವಕಾಶವಿಲ್ಲವಾಗಿತ್ತು. ಈಗಿನ ಮಕ್ಕಳಿಗೆ ಬೇಸಾಯ ಅಂದರೆ ಏನು, ಗದ್ದೆಯಲ್ಲಿ ಯಾವ ಬೆಳೆ ಬೆಳೆಯುತ್ತಾರೆ ಎಂಬುದು ಮಾಹಿತಿ ಇಲ್ಲವಾಗಿದೆ. ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಿಂದ ಮಕ್ಕಳಿಗೆ ಹಿಂದಿನ ಜೀವನ ಪದ್ಧತಿ ಮತ್ತು ಆಚಾರ ವಿಚಾರ ಮರುಕಳಿಸುತ್ತದೆ. ಕೆಸರಿಗೆ ಒಂದು ರೋಗನಿರೋಧಕ ಶಕ್ತಿ ಗುಣ ಹೊಂದಿದೆ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಮನರಂಜನೆಯೊಂದಿಗೆ ವ್ಯಾಯಾಮ ಕೂಡ ಆಗಿದೆ ಎಂದು ಹೇಮನಾಥ ಶೆಟ್ಟಿ ಕಾವು ತಿಳಿಸಿದರು.
ಕೃಷಿ ಕುಟುಂಬ ಬದಕನ್ನು ರೂಪಿಸುವ ಕೆಲಸ ಸಂಘಟಕರಿಂದ ಆಗಿದೆ: ಶಶಿಕುಮಾರ್ ಬಾಲ್ಯೋಟ್ಟು
ಹಿಂದಿನ ಕಾಲದಲ್ಲಿ ಅಟಿ ತಿಂಗಳು ಕಷ್ಟದ ತಿಂಗಳಾಗಿತ್ತು. ತಮ್ಮ ಹಿರಿಯರು ತಿಮರೆ, ತಜಂಕ್, ಇತ್ಯಾದಿ ಪದಾರ್ಥ ಸೇವನೆ ಮಾಡಿ ಜೀವನ ಸಾಗಿಸುತ್ತಿದ್ದರು. ಇಂದು ಎಲ್ಲಾ ತಿಂಗಳಲ್ಲಿ ಸಮಾನವಾಗಿ ರೀತಿಯಲ್ಲಿ ಜೀವನ ಮಾಡುತ್ತಿದೇವೆ. ಕೃಷಿ ಕುಟುಂಬ ಬದುಕನ್ನು ನೆನಪಿಸುವ ಕೆಲಸ ಸಂಘಟಕರಿಂದ ಆಗಿದೆ. ಮುಂದೆ ತುಳುನಾಡಿನ ಕ್ರೀಡೆ ಮತ್ತು ಸಂಸ್ಕೃತಿ ಉಳಿಸುವ ಕೆಲಸ ಅಗಲಿ ಎಂದು ಶಶಿಕುಮಾರ್ ಬಾಲ್ಯೋಟ್ಟು ಹೇಳಿ ಶುಭ ಹಾರೖೆಸಿದರು.
ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ,ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ, ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು ಹಿಂದೂ ಮುಖಂಡರು, ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲ ,ಗೌರವ ಉಪಸ್ಥಿತರಾಗಿ ಬಡಗನ್ನೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ, ನಿವೃತ್ತ ಪೋಲಿಸ್ ಅಧೀಕ್ಷಕರಾದ ಭಾಸ್ಕರ ಬಟ್ಟಂಗಳ, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ, ಕಾವು ನಾರಾಯಣ ರೈ, ಕುದ್ದಾಡಿ, ‘ಮಾನಸ, ಸಂತೋಷ್ ರೈ, ಸಬ್ರುಕಜೆ, , ‘ ಧರ್ಮಸ್ಥಳ ಕೇಂದ್ರ ಕಚೇರಿ, ಸಂಪೂರ್ಣ ಸುರಕ್ಷಾ ವಿಭಾಗ, ಯೋಜನಾಧಿಕಾರಿ ನಾರಾಯಣ ಪಾಟಾಳಿ, ಬಡಕ್ಕಾಯರು, ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಶ್ರೀನಿವಾಸ ಗೌಡ, ಕನ್ನಯ, ಉದಯ ಕುಮಾರ್ ಪಡುಮಲೆ, ಗೋಪಾಲ ನಾಯ್ಕ ದೊಡ್ಡಡ್ಡ, ಉಪಸ್ಥಿತರಿದ್ದರು.
ವಿಶೇಷ ಅಹ್ವಾನಿತರಾಗಿ ಸುಧಾಕರ ಶೆಟ್ಟಿ ಮಂಗಳಾದೇವಿ, ಆನಂದ ರೖೆ ಮೇಗಿನಮನೆ, ಕುಂಬ್ರ ಕೃ ಪ.ಸ ಸಂಘದ ನಿರ್ದೇಶಕಿ ಮಲ್ಲಿಕಾ ಪ್ರಸಾದ್, ಬಡಗನ್ನೂರು ಶಾಲಾ ಎಸ್. ಡಿ. ಯಂ. ಸಿ ಅಧ್ಯಕ್ಷ ಗಿರೀಶ ಗೌಡ ಕನ್ನಯ, ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುರೇಶ್ ರೈ, ಪಲ್ಲತ್ತಾರು, ಕೃಷ್ಣ ಗೌಡ, ಮೈಂದನಡ್ಕ,ಶ್ರೀಶಾ ವಾಸವಿ (ವಿದ್ಯಾಶ್ರೀ), ಪಡುಮಲೆ,ರಾಜೇಶ, ಸುಳ್ಯಪದವು ಶಿಕ್ಷಕಿಯಾರದ ಭವ್ಯಾ ವಿನೋದ್, ಸಂದ್ಯಾ ನವೀನ ಪಕಳ,ಪ್ರಕಾಶ ರೈ ಕೖೊಲ,ಬಡಗನ್ನೂರು ಗ್ರಾ. ಪಂ ಉಪಾಧ್ಯಕ್ಷೆ ಸುಶೀಲ ಪಕ್ಯೂಡ್, ಸದಸ್ಯರಾದ ವೆಂಕಟೇಶ್ ಕನ್ನಡ್ಕ, ಸುಜಾತ ಮೈಂದನಡ್ಕ, ಉಲ್ಲಾಸ್ ಪಡ್ಡು, ಪಡುಮಲೆ ಮೂಡಬಿದ್ರೆ ಆಳ್ವಾಸ್ ನ ಸಂದೇಶ್ ಪಕ್ಕಳ ಕುದ್ದಾಡಿ, ಸುಳ್ಯಪದವು ಆಯುಧ ಪೂಜೆ ಸೇವಾ ಸಮಿತಿ, ಅಧ್ಯಕ್ಷ ಗಿರೀಶ್ ಕುಮಾರ್ ಕನ್ನಡ್ಕ, ಈಶ್ವರಮಂಗಳ ಅಡಿಕೆ ವ್ಯಾಪಾರಿ ವಿನೋದ್ ರೈ ನೆಕ್ರಾಜೆ, ಅಶ್ವಥ್ ರೈ ಮೈಂದನಡ್ಕ ಸತೀಶ ರೈ ಮೇಗಿನಮನೆ, ಲೋಕೇಶ್ ರೈ ಮೇಗಿನಮನೆ ಭರತ್, ಸಾರೆಪ್ಪಾಡಿ, ಸುಧಾಕರ ರೖೆ ಕಟ್ಟಾವು,ಈಶ್ವರ ಮಂಗಳ ಶಿವದುರ್ಗ ಶಾಮಿಯಾನ ಮಾಲಕ ಮೋನಪ್ಪ ಪಿ.ಪುತ್ತೂರು ಕೆ. ಎಸ್. ಆರ್. ಟಿ ಅಚ್ಚುತ್ತ ಗೌಡ ಮೋಡಿಕೆ, ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘ, ಅಧ್ಯಕ್ಷ ಸೀತಾರಾಮ ಗೌಡ, ಉಳಯ, ನಂದಕಿಶೋರ ಕ್ಕೊಲ ಮತ್ತೂರು ಮರಾಠಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ, , ಸುಧಾಕರ ಶೆಟ್ಟಿ, ಮಂಗಳಾದೇವಿ, ಮುಡಿಪಿನಡ್ಕ , ಸುಳ್ಯಪದವು ಸ್ವಾಮಿ ಕೊರಗಜ್ಜ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ಶಬರಿನಗರ, , ಪಡುಮಲೆ ವರಮಹಾಲಕ್ಷ್ಮಿ ಸೇವಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಪಟ್ಟೆ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, , ಪದಡ್ಡ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಅಧ್ಯಕ್ಷ ಉದಯ ಕುಮಾರ್ ಪದಡ್ಕ, ಮುಡಿಪಿನಡ್ಕಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಉಮೇಶ ಆಚಾರ್ಯ ಬಬ್ಲಿ, , ಪಡುಮಲೆ ಶ್ರೀ ಕ್ಷೇತ್ರ ಮದಕ ನವರಾತ್ರಿ ಉತ್ಸವ ಸಮಿತಿ, ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಭಾಗವಹಿಸಿದ್ದರು.
ಗಣೇಶೋತ್ಸವ ಸಮಿತಿ, ಗೌರವ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಡ, ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸುರೇಶ್ ರೖೆ ಪಳ್ಳತ್ತಾರು ವಂದಿಸಿದರು ಉದಯ್ ಕಲ್ಲಡ್ಕ ಹಾಗೂ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಬಳಿಕ ಅದೇ ಗದ್ದೆಯಲ್ಲಿ ಬೇಸಾಯ ಮಾಡಿ ಅದರ ಉಸ್ತುವಾರಿ ವಹಿಸಿದ್ದ ಸಮಿತಿ ಸದಸ್ಯರಾದ ಸುರೇಶ್ ರೖೆ ಪಳ್ಳತ್ತಾರು ಹಾಗೂ ರಾಜೇಶ್ ರೖೆ ಮೇಗಿನಮನೆ ಮತ್ತು ಪಡುಮಲೆ ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷರಾಗಿದ್ದ, ಭಜನಾ ಕಾರ್ಯಕ್ರಮವನ್ನು ಮುನ್ನಡೆನುತ್ತಿರುವ ಸುಬ್ಬಯ್ಯ ರೈ ಹಲಸಿನಡಿ ಇವರುಗಳನ್ನು ಪೇಟ, ಸಾಲು, ಹಾರ, ಷಲಪುಷ್ಪ, ಸ್ಮರಣಿಕೆ ನೀಡಿ ಅಭಿನಂದನೆ ಮಾಡಲಾಯಿತು.
ವಿಶೇಷ ಆಕರ್ಷಣೆ
ವಿಶೇಷ ಆಕರ್ಷಣೆಯಾಗಿ ತುಳು ಚಿತ್ರ ನಟ-ನಟಿಯರು ಮತ್ತು ಕಂಬಳ ಕೋಣಗಳ ಓಟ ಮತ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಹೂಸ ಮೆರಗು ನೀಡಿತು.ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ, ಹಾಗೂ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಕೂಟ ಅಯೋಜಿಸಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.