ಪುತ್ತೂರು:ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ರಸ್ತೆಯ ಆನೆಮಜಲು ಬಳಿ ರಸ್ತೆ ದುರಸ್ತಿ ಕಾಮಗಾರಿಗಾಗಿ ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ರಸ್ತೆಯನ್ನು ಡೈವರ್ಟ್ ಮಾಡಿದ್ದು ಈ ಕುರಿತು ಸೂಚನಾ ಫಲಕವಿಲ್ಲದೆ ವಾಹನ ಸವಾರರು ಗೊಂದಲಕ್ಕೀಡಾಗಿ ಅಪಘಾತಗಳು ನಡೆಯುತ್ತಿವೆ.ಜು.28ರಂದು ಕೇಪುಳು ಸಮೀಪ ಕಾರು ಹಾಗೂ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ರಿಕ್ಷಾ ಪುತ್ತೂರು ಪೇಟೆ ಕಡೆಗೆ ಹೋಗುತ್ತಿದ್ದರೆ,ಕಾರು ಉಪ್ಪಿನಂಗಡಿ ಕಡೆಗೆ ಹೋಗುತ್ತಿತ್ತು.ರಿಕ್ಷಾದಲ್ಲಿ ಇಬ್ಬರು ಹಿರಿಯ ವ್ಯಕ್ತಿಗಳಿದ್ದು,ಅಪಘಾತದಿಂದ ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಯಿಂದ ರಿಕ್ಷಾದ ಮುಂಭಾಗ ಹಾಗೂ ಗಾಜಿಗೆ ಹಾನಿಯಾಗಿದೆ.ಕಾರು ಜಖಂಗೊಂಡಿದೆ.ಘಟನೆ ಬಳಿಕ ಕೆಲ ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.