ಕಾಣಿಯೂರು : ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಅವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಇಡ್ಯಡ್ಕ ನಿವಾಸಿ ಜಯಾ (65 ವ.) ಮೃತಪಟ್ಟವರು. ಅವಿವಾಹಿತರಾಗಿದ್ದ ಜಯಾ ಅವರು ತಮ್ಮ ಅವಿವಾಹಿತ ಸಹೋದರಿಯರಾದ ಸಿದ್ದಮ್ಮ ,ಧರ್ಮಾವತಿ ಅವರೊಂದಿಗೆ ವಾಸವಾಗಿದ್ದು,ಜು.28ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಮೃತರ ಬಾವ ಸುಬ್ರಹ್ಮಣ್ಯದ ನಾರಾಯಣ ಅಗ್ರಹಾರ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.