ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವ ಪ್ರಾಯೋಜಿತ ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿ ಇದರ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.27ರಂದು ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ರೋಟರ್ಯಾಕ್ಟ್ ಕ್ಲಬ್ನ ನೂತನ ಅಧ್ಯಕ್ಷ ನಿತೇಶ್ ರೈ ಕೋರಂಗರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಪದ ಪ್ರದಾನ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಶುಭಾಶಯ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿ ಇದರ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ ಕೆದಂಬಾಡಿಗುತ್ತು, ಹಿಂದಿನ ಸಹಾಯಕ ಗವರ್ನರ್ ಹರ್ಷ ಕುಮಾರ್ ರೈ, ಕೆನರಾ ಝೋನ್ನ ಝಡ್ಆರ್ಎಲ್ ಸುಬ್ರಮ ಪಿ.ವಿಯವರುಗಳು ಸಂದರ್ಭೋಚಿತವಾಗಿ ಮಾತನಾಡಿ ನೂತನ ತಂಡಕ್ಕೆ ಶುಭಾಶಯ ಕೋರಿದರು. ವೇದಿಕೆಯಲ್ಲಿ ಕ್ಲಬ್ನ ಸಭಾಪತಿಗಳಾದ ಶರತ್ ಜಿ, ಕ್ಲಬ್ನ ಅಧ್ಯಕ್ಷ ನಿತೇಶ್ ರೈ ಕೋರಂಗ, ನಿಕಟಪೂರ್ವ ಅಧ್ಯಕ್ಷ ಮನ್ಮಿತ್ ರೈ ಬಾಕುರ, ನಿರ್ಗಮಿತ ಕಾರ್ಯದರ್ಶಿ ಕಿರಣ್ ರೈ, ನೂತನ ಕಾರ್ಯದರ್ಶಿ ಅಮೋಘ ರಾವ್, ಉಪಾಧ್ಯಕ್ಷರಾದ ಪ್ರಜ್ವತ್ ರೈ ಉಪಸ್ಥಿತರಿದ್ದರು. ಕ್ಲಬ್ನ ನೂತನ ಅಧ್ಯಕ್ಷ ನಿತೇಶ್ ರೈ ಕೋರಂಗರವರು ಮಾತನಾಡಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ಕ್ಲಬ್ನ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ಕ್ಲಬ್ನ ನಿರ್ಗಮಿತ ಅಧ್ಯಕ್ಷ ಮನ್ಮಿತ್ ರೈ ಬಾಕುಡರವರು ತನ್ನ ಅವಧಿಯಲ್ಲಿ ಕ್ಲಬ್ನಿಂದ ನಡೆದು ಬಂದ ಕಾರ್ಯಕ್ರಮಗಳ ಬಗ್ಗೆ ಸಭೆಯ ಮುಂದಿಟ್ಟು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ, ಗೌರವಾರ್ಪಣೆ
ವೃತ್ತಿ ಸೇವಾ ವಿಭಾಗದಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡ ಕ್ಲಬ್ನ ಮಾಜಿ ಅಧ್ಯಕ್ಷ ದೇವಿಚರಣ್ ರೈ ಮಾಲಾರುಬೀಡುರವರನ್ನು ಸನ್ಮಾನಿಸಲಾಯಿತು ಹಾಗೆ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಕ್ಲಬ್ನ ಮಾಜಿ ಅಧ್ಯಕ್ಷ, ಸುದ್ದಿ ಬಿಡುಗಡೆಯ ಶ್ರೀಧರ ರೈ ಕೋಡಂಬರವರನ್ನು ಸನ್ಮಾನಿಸಲಾಯಿತು. ಸಮುದಾಯ ವಿಭಾಗದಿಂದ ಕೆದಂಬಾಡಿ ಸನ್ಯಾಸಿಗುಡ್ಡೆ ಅಂಗನವಾಡಿಗೆ ಆಹಾರ ಶೇಖರಣಾ ಬಾಕ್ಸ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಯುವಜನ ಸೇವಾ ವಿಭಾಗದಿಂದ ನರಿಮೊಗರು ಸಾಂಧಿಪನಿ ಗ್ರಾಮೀಣ ವಿದ್ಯಾಸಂಸ್ಥೆಯ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಸಾತ್ವಿಕ್ ರೈ ಎಂ, ಕೆದಂಬಾಡಿ ಸ.ಹಿ.ಪ್ರಾ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಚಿತ್ ರೈ, ತಿಂಗಳಾಡಿ ಶಾಲೆಯ ವಿದ್ಯಾರ್ಥಿನಿ ರಂಜಿತಾರವರುಗಳನ್ನು ಗೌರವಿಸಲಾಯಿತು. ಅಂತರರಾಷ್ಟ್ರೀಯ ವಿಭಾಗದಲ್ಲಿ ಕ್ಲಬ್ನ ಸದಸ್ಯರಾದ ಸ್ವರೂಪ್ ರೈಯವರು ಜಪಾನ್ ಕಿಯೋ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದು ಅವರನ್ನು ಗೌರವಿಸಲಾಯಿತು ಹಾಗೇ ನೂತನ ಸದಸ್ಯರನ್ನು ಮತ್ತು ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ಸಭೆಯಲ್ಲಿ ಕೃಷಿಕ ಸಮಾಜ ಜಿಲ್ಲಾ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕೆದಂಬಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಗೌಡ ಇದ್ಯಪೆ, ತಿಂಗಳಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹಮೀದ್ ಡಿ, ಶ್ರೀಕೃಷ್ಣ ಮಿತ್ರವೃಂದದ ಜಯರಾಮ ರೈ ಬಾಲಯ, ಅಭಿನಂದನ್ ಸ್ಪೋಟ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಸತೀಶ್ ರಯ ಎಂ, ಶ್ರೀರಾಮ ಮಂದಿರ ಕೆದಂಬಾಡಿ ಇದರ ಉಪಾಧ್ಯಕ್ಷ ಲಿಖಿತ್ ಗೌಡ ಇದ್ಯಪೆ, ದೇವತಾ ಭಜನಾ ಮಂಡಳಿಯ ಕಿಶೋರ್ ದರ್ಬೆ, ರೋಟರ್ಯಾಕ್ಟ್ ಇದರ ಮಾಜಿ ಅಧ್ಯಕ್ಷರಾದ ಗಣೇಶ್ ರೈ ಮಿತ್ರಂಪಾಡಿ, ಸೂರ್ಯಪ್ರಸನ್ನ ರೈ ಎಂಡೆಸಾಗು, ಸುರಕ್ಷಾ ರೈ ಕೋಡಂಬು, ರವಿ ಕುಮಾರ್ ರೈ, ನಿಶಾಂತ್ ರೈ ಸೊರಕೆ, ಹರೀಶ್ ರೈ ಮಿತ್ತೋಡಿ, ಅನೀಶ್ ಶೆಟ್ಟಿ ಸೊರಕೆ, ಪ್ರದ್ವಿನ್ ರೈ, ಹರ್ಷಿತ್ ರೈ ಸೇರಿದಂತೆ ಕ್ಲಬ್ನ ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರಣಾಮ್ ಪ್ರಾರ್ಥಿಸಿ, ಮನ್ಮಿತ್ ಸ್ವಾಗತಿಸಿದರು. ಅಮೋಷ್ ರಾವ್ ವಂದಿಸಿದರು. ರೋಟರಿ ಪೂರ್ವದ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಲೋಹಿತ್ ಗೌಡ ಗುತ್ತು, ಸುರಕ್ಷಾ ಕೋಡಂಬು ಸಹಕರಿಸಿದರು.
ಪದಸ್ವೀಕಾರ
ಕ್ಲಬ್ನ ಅಧ್ಯಕ್ಷರಾಗಿರುವ ನಿತೇಶ್ ರೈ ಕೋರಂಗರವರು ಕೋರಂಗ ಜಯಶೀಲ್ ರೈ ಮತ್ತು ಪ್ರೇಮಲತ ರೈಯವರ ಪುತ್ರರಾಗಿದ್ದಾರೆ. ತಿಂಗಳಾಡಿಯಲ್ಲಿ ಸುಬ್ರಹ್ಮಣ್ಯ ಶಾಮಿಯಾನ ಸರ್ವೀಸಸ್ ಹೊಂದಿರುವ ಇವರು ಕೆದಂಬಾಡಿ ಯುವರಂಗದ ನಿಕಟಪೂರ್ವ ಅಧ್ಯಕ್ಷರಾಗಿ, ತಾಲೂಕು ಯುವ ಬಂಟರ ಸಂಘದ ಕೆದಂಬಾಡಿ ಗ್ರಾಮ ಸಮಿತಿಯ ಸಂಚಾಲಕರಾಗಿ, ಕೆದಂಬಾಡಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿರುವ ಅಮೋಘ್ ರಾವ್ರವರು ಸೊರಕೆ ದಿನೇಶ್ ರಾವ್ ಮತ್ತು ವೀಣಾರವರ ಪುತ್ರರಾಗಿದ್ದಾರೆ. ಜತೆ ಕಾರ್ಯದರ್ಶಿಯಾಗಿ ಸಂತೋಷ್ ರೈ ಬಳ್ಳಮಜಲು, ಕೋಶಾಧಿಕಾರಿಯಾಗಿ ಹರ್ಷಿತ್ ರೈ ಕುಕ್ಕುಂಜೋಡು, ದಂಡಾಧಿಕಾರಿಯಾಗಿ ಅಕ್ಷತ್ ರೈ ಚಾವಡಿ, ಅಂತರರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕರಾಗಿ ಹರೀಶ್ ರೈ ಮಿತ್ತೋಡಿ, ಕ್ಲಬ್ ಸೇವಾ ವಿಭಾಗದ ನಿರ್ದೇಶಕರಾಗಿ ಲೋಹಿತ್ ಗೌಡ, ಸಮುದಾಯ ಸೇವಾ ವಿಭಾಗದ ನಿರ್ದೇಶಕರಾಗಿ ಪ್ರದ್ವಿನ್ ರೈ ಕೆ, ಕ್ರೀಡಾ ಕಾರ್ಯದರ್ಶಿಯಾಗಿ ಧನುಷ್ ರೈ ಬಾಕುಡ, ಸಾಂಸ್ಕೃತಿಕ ಸೇವಾ ವಿಭಾಗ ನಿರ್ದೇಶಕರಾಗಿ ಸನತ್ ಗೌಡ ವೀರಮಂಗಲ, ಕ್ಲಬ್ ಸಲಹೆಗಾರರಾಗಿ ಅನೀಶ್ ಶೆಟ್ಟಿ ಕಲ್ಲಮೆಟ್ಟುರವರು ಪದಸ್ವೀಕರಿಸಿದರು.
18 ಹೊಸ ಸದಸ್ಯರ ಸೇರ್ಪಡೆ
ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿಗೆ ನಿತೇಶ್ ರೈ ಕೋರಂಗರವರ ಅಧ್ಯಕ್ಷತೆಯಲ್ಲಿ ಪದಪ್ರದಾನ ಸಮಾರಂಭದಲ್ಲಿ 18 ಹೊಸ ಸದಸ್ಯರುಗಳನ್ನು ಸೇರ್ಪಡೆಗೊಳಿಸಲಾಯಿತು. ಕ್ಲಬ್ನ ಇತಿಹಾಸದಲ್ಲೇ 18 ಜನ ಸದಸ್ಯರು ಏಕಕಾಲದಲ್ಲಿ ಸೇರ್ಪಡೆಗೊಳ್ಳುತ್ತಿರುವುದು ಇದು ಪ್ರಥಮವಾಗಿದೆ.
ಕೆದಂಬಾಡಿ ಯುವರಂಗದಿಂದ ಗೌರವಾರ್ಪಣೆ
ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿಯ ನೂತನ ಅಧ್ಯಕ್ಷರಾಗಿ ಪದಸ್ವೀಕರಿಸಿದ ನಿತೇಶ್ ರೈ ಕೋರಂಗರವರಿಗೆ ಯುವರಂಗ ಕೆದಂಬಾಡಿ ಇದರ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವರಂಗ ಅಧ್ಯಕ್ಷ ರಕ್ಷಿತ್ ಗೌಡ ಇದ್ಯಪೆ,ಸಂಚಾಲಕ ಸುರೇಶ್ ರೈ ಮಾಣಿಪ್ಪಾಡಿ, ಗೌರವ ಸಲಹೆಗಾರ ನೇಮಣ್ಣ ಗೌಡ ಇದ್ಯಪೆ,ಮಾಜಿ ಸಂಚಾಲಕ ವಿಜಯ ಕುಮಾರ್ ರೈ ಕೋರಂಗ, ಕೃಷ್ಣ ಕುಮಾರ್ ಗೌಡ ಇದ್ಯಪೆ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.