ಕಡಬ ಪಟ್ಟಣ ಪಂಚಾಯತ್ ಚುನಾವಣೆ : ಚುನಾವಣಾ ಅಧಿಕಾರಿಗಳ ನೇಮಕ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇದೀಗ ಚುನಾವಣಾ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ವಾರ್ಡ್ ನಂ. 1ರಿಂದ 7 ರವರೆಗೆ(1-ಕಳಾರ,2-ಕೋಡಿಬೈಲು3-ಪನ್ಯ4-ಬೆದ್ರಾಜೆ, 5-ಮಾಲೇಶ್ವರ,6- ಕಡಬ,7-ಪಣೆಮಜಲು) ಚುನಾವಣಾ ಅಧಿಕಾರಿಯಾಗಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ವಿಮಲ ಬಾಬು, ಸಹಾಯಕ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ(ಪ್ರಭಾರ) ಭುವನೇಂದ್ರ ಕುಮಾರ್ ಎಂ. ವಾರ್ಡ್ 8ರಿಂದ 13ರವರೆಗೆ(8-ಪಿಜಕಳ 9-ಮೂರಾಜೆ,10-ದೊಡ್ಡಕೊಪ್ಪ,11-ಕೋಡಿಂಬಾಳ,12-ಮಜ್ಜಾರು,13-ಪುಳಿಕುಕ್ಕು) ಚುನಾವಣಾಧಿಕಾರಿಯಾಗಿ ಸುಬ್ರಹ್ಮಣ್ಯ ವಿಶೇಷ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ , ಸಹಾಯಕ ಚುನಾವಣಾಧಿಕಾರಿಯಾಗಿ ಕೊಯಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್. ಅವರನ್ನು ನೇಮಕಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಗಳು ಇಂದಿನಿಂದ ಪ್ರಾರಂಭಗೊಂಡಿದ್ದು, ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕಛೇರಿಯು ಪ್ರಾರಂಭವಾಗಿದೆ.

LEAVE A REPLY

Please enter your comment!
Please enter your name here