ದರ್ಬೆ ನಯಾ ಚಪ್ಪಲ್ ಬಜಾರ್ ರವರಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಸ್ಪರ್ಧೆ

0

ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ | ಹನ್ನೆರಡು ಪ್ರಶ್ನೆಗಳು | ಅಂಚೆ ಮೂಲಕ ಉತ್ತರಿಸುವುದು

ಪುತ್ತೂರು: ದರ್ಬೆ ಬುಶ್ರಾ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ನಯಾ ಚಪ್ಪಲ್ ಬಜಾರ್ ಮಳಿಗೆಯು ದ್ವಿತೀಯ ಬಾರಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿನೂತನ ರಸ ಪ್ರಶ್ನೆ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ಪಡೆಯುವ ಸುವರ್ಣಾವಕಾಶವಿದೆ.


ಸ್ಪರ್ಧಾ ನಿಯಮಗಳು:
ಸ್ಪರ್ಧಿಗಳು ಹನ್ನೆರಡು ಪ್ರಶ್ನೆಗಳಿಗೆ ಅಂಚೆ ಮೂಲಕ ಉತ್ತರಿಸಬೇಕು. ಆಗಸ್ಟ್ 13ರ ಒಳಗೆ ಉತ್ತರ ತಲುಪುವಂತಾಗಬೇಕು. ಪ್ರಥಮ, ದ್ವಿತೀಯ, ತೃತೀಯ ಮತ್ತು 7 ಆಕರ್ಷಕ ಬಹುಮಾನಗಳಿವೆ. ವಿಜೇತರಿಗೆ ಆಗಸ್ಟ್ ಹದಿನೈದು ಸ್ವಾತಂತ್ರೋತ್ಸವದ ದಿನದಂದು ದರ್ಬೆ ನಯಾ ಚಪ್ಪಲ್ ಬಜಾರ್ ಶೋರೂಂನಲ್ಲಿ ‌ಬಹುಮಾನ ವಿತರಿಸಲಾಗುವುದು. ಒಂದಕ್ಕಿಂತ ಹೆಚ್ಚು ಸಮಾನ ಅಂಕಗಳು ಬಂದರೆ ವಿಜೇತರನ್ನು ಡ್ರಾ ಮೂಲಕ ನಿರ್ಧರಿಸಲಾಗುತ್ತದೆ. ವಿಜೇತರಿಗೆ ಆಗಸ್ಟ್ 14 ರಂದು ಮಾಹಿತಿ ನೀಡಲಾಗುವುದು. ಸ್ಪರ್ಧಿಗಳು ತಮ್ಮ, ಹೆಸರು, ತರಗತಿ, ಶಾಲೆ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು ಎಂಬ ನಿಯಮವನ್ನು ಸ್ಪರ್ಧಿಗಳು ಪಾಲಿಸಬೇಕಾಗುತ್ತದೆ.


12 ರಸ ಪ್ರಶ್ನೆಗಳು:
1)ಭಾರತದ ಯಾವ ಪ್ರಧಾನ ಮಂತ್ರಿಗಳ ಕಾಲದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು 2)”ಸತ್ಯದೊಂದಿಗೆ ನನ್ನ ಪ್ರಯೋಗಗಳು “(Experience With Truth) ಪುಸ್ತಕವನ್ನು ಬರೆದವರು ಯಾರು? 3)1965ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭ ಯಾರು ಭಾರತದ ಪ್ರಧಾನ ಆಗಿದ್ದರು?, 4)ಮಹಾತ್ಮ ಗಾಂಧೀಜಿಯವರನ್ನು “ರಾಷ್ಟ್ರಪಿತ”(Father of the Nation) ಎಂಬುದಾಗಿ ಯಾರು ಮೊಟ್ಟ ಮೊದಲಾಗಿ ಕರೆದರು?, 5)1971ರ ಬಾಂಗ್ಲಾದೇಶಕ್ಕಾಗಿ ನಡೆದ ಯುದ್ಧದಲ್ಲಿ ಭಾರತದ ಫೀಲ್ಡ್ ಮಾರ್ಷಲ್ ಆಗಿ ಯಾರು ಸೇವೆ ಸಲ್ಲಿಸಿದ್ದರು?, 6)”ಜಲಿಯಾನ್ ವಾಲಾ” ಹತ್ಯಾಕಾಂಡ ನಡೆದ ವರ್ಷ ಯಾವುದು?, 7) “ಆಜಾದ್-ಹಿಂದ್ ಫೌಜ್”ನ ಸ್ಥಾಪಕ ಯಾರು?, 8)” ವಂದೇ ಮಾತರಂ” ರಾಷ್ಟ್ರಗೀತೆಯನ್ನು ಯಾವ ಕಾದಂಬರಿಯಿಂದ ತೆಗೆದುಕೊಳ್ಳಲಾಗಿದೆ?, 9)ರಾಣಿ ಚೆನ್ನಮ್ಮ ಯಾವ ರಾಜವಂಶಕ್ಕೆ ಸೇರಿದವರು?, 10)”ಸೈಮನ್ ಕಮಿಷನ್” ಭಾರತಕ್ಕೆ ಯಾವ ವರ್ಷ ಬಂದಿತು?, 11)”ಗಾಂಧೀಜಿಯವರ ಕಿರಿಯ ತಂಗಿ” ಎಂದು ಕರೆಯಲ್ಪಡುವ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ ಯಾರು?, 12)ನಯಾ ಚಪ್ಪಲ್ ಬಜಾರ್ ನಲ್ಲಿ ಪಾದರಕ್ಷೆಗಳಲ್ಲದೆ ಬೇರೆ ಯಾವ ವಸ್ತುಗಳು ಮಾರಾಟ ಮಾಡುತ್ತಾರೆ?
ಹೀಗೆ ವಿದ್ಯಾರ್ಥಿಗಳು ಹನ್ನೆರಡು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.


ಸ್ವಾತಂತ್ರೋತ್ಸವದ ಅಂಗವಾಗಿ ಮಳಿಗೆಯು ಏರ್ಪಡಿಸಿದ ಈ ರಸ ಪ್ರಶ್ನೆ ಸ್ಪರ್ಧೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಮಳಿಗೆಯ ಮಾಲಕರಾದ ರಫೀಕ್ ಎಂ.ಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here