ಪುತ್ತೂರು: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಮತ್ತು ನೇತ್ರಾವತಿ ತುಳುಕೂಟ (ರಿ) ರಾಮಕುಂಜ ಇದರ ಆಶ್ರಯದಲ್ಲಿ ‘ಕೆಸರ ಜಾಲಗೊಬ್ಬು’ ವಿಶೇಷ ಕಾರ್ಯಕ್ರಮವು ಆಲಂಕಾರಿನ ಮಾಯಿಲ್ಗ ಗದ್ದೆಯಲ್ಲಿ ಜರುಗಿತು.

ಸಂಸ್ಥೆಯ ಕಾರ್ಯದರ್ಶಿ ಹಾಗೂ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರಾಗಿರುವ ಕೆ ಸೇಸಪ್ಪ ರೈ ಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಕೃತಿ ಹಾಗೂ ಮಾನವನಿಗೆ ಅವಿನಾಭಾವ ಸಂಬಂಧ ಇದೆ. ಪ್ರಕೃತಿಯ ಮಡಿಲಲ್ಲಿರುವ ನಾವು ಕೆಸರು ತುಂಬಿದ ಗದ್ದೆಯಲ್ಲಿ ವಿವಿಧ ಆಟಗಳನ್ನು ಆಡಿ,ಅದರ ಅನುಭವವನ್ನು ಪಡೆದು, ಪ್ರಕೃತಿಯ ಸೊಬಗನ್ನು ಅರಿತಾಗ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಗದ್ದೆಯ ಯಜಮಾನರಾದ ಉಮೇಶ್ ಮಾಯಿಲ್ಗ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಹಶಿಕ್ಷಕರಾದ ಕಿಶೋರ್ ಕುಮಾರ್ ಬಿ ಸ್ವಾಗತಿಸಿ, ಸಹಶಿಕ್ಷಕ ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸರಿತಾ, ಸಹಶಿಕ್ಷಕ ವಸಂತ್ ಕುಮಾರ್, ನಿಲಯ ಪಾಲಕ ಪ್ರಖ್ಯಾತ್ ಆಳ್ವ ಸಹಕರಿಸಿದರು.