ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ – ರೆ.ಫಾ.ಜಾರ್ಜ್ ಸ್ಯಾಮುವೆಲ್ ಓಐಸಿ
ನೆಲ್ಯಾಡಿ: ಬೆಥನಿ ಸಂಸ್ಥೆಯು ಶಿಸ್ತು ಸಮರ್ಪಣೆ ಹಾಗೂ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದೆ. ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ. ವಿದ್ಯಾರ್ಥಿಗಳು ನಾಳೆ ಎಲ್ಲಿ ಹೋದರೂ, ಎಲ್ಲಿ ಕೆಲಸ ಮಾಡಿದರೂ ಅದನ್ನು ನಿಷ್ಠೆಯಿಂದಲೂ, ಶ್ರದ್ಧೆಯಿಂದಲೂ ಪ್ರಾಮಾಣಿಕತೆಯಿಂದಲೂ ಮಾಡಿ ಎಂದು ರೆ.ಫಾ.ಜಾರ್ಜ್ ಸ್ಯಾಮುವೆಲ್ ಓಐಸಿ ಯಶಸ್ಸಿನ ಪಥಕ್ಕೆ ಹೆಜ್ಜೆ ಇಟ್ಟ ಬೆಥನಿ ಐಟಿಐ ವಿದ್ಯಾರ್ಥಿಗಳಿಗೆ ಆಶೀರ್ವಾದದ ಮಾತುಗಳಾಡಿದರು.

ಅವರು ಬೆಥನಿ ಐಟಿಐ ಯಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ರೆ. ಫಾ. ಜೈಸನ್ ಸೈಮನ್ ಓ ಐ ಸಿ, ಪ್ರಾಚಾರ್ಯರಾದ ಸಜಿ ಕೆ ತೋಮಸ್, ತರಬೇತಿ ಅಧಿಕಾರಿ ಜಾನ್ ಪಿ ಎಸ್, ಸಿಬ್ಬಂದಿ ಕಾರ್ಯದರ್ಶಿ ಹರಿಪ್ರಸಾದ್ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಜೇಮ್ಸ್ ಕೆ ಎ ಸ್ವಾಗತಿಸಿ ವರ್ಗೀಸ್ ಎನ್ ಟಿ ವಂದನಾರ್ಪಣೆ ಗೈದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.