ಪುತ್ತೂರು: ಬೊಳುವಾರು ನಿವಾಸಿ ಕರೋಪಾಡಿ ಅಕ್ಷಯ್ ನಾಯಕ್ ಅವರ ನಿರ್ದೇಶನದ ದಾಸರಪದಗಳ ‘ತಂಬೂರಿ ಮೀಡಿದವ’ ಎಂಬ ಧ್ವನಿಸುರುಳಿ ಜು.29ರ ನಾಗರ ಪಂಚಮಿಯಂದು ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಲೋಹಿತ್ ಮತ್ತು ರಂಜಿನಿ ಪ್ರಸ್ತುತಪಡಿಸುವ ಪುರಂದರ ದಾಸರ ಸಾಹಿತ್ಯವುಳ್ಳ ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶಿಸಿ, ಅರುಣ್ ರೈ ಪುತ್ತೂರು ಛಾಯಾಗ್ರಹಣದ, ಸಾತ್ವಿಕ್ ಪಡಿಯಾರ್ ಸಂಗೀತ ನಿರ್ದೇಶನ ಮಾಡಿರುವ ಮಾಸ್ಟರ್ ವಿಹಾನ್ ಲೋಹಿತ್ ಹಾಡಿರುವ ಧ್ವನಿ ಸುರುಳಿ ತಂಬೂರಿ ಮೀಟಿದವ ಹಾಡು ಬಿಡುಗಡೆಗೊಂಡಿದೆ.