ಮೂರು ದಿನಗಳ ಕ್ರೇಝೀ ಡೀಲ್, ಆಟಿ ತಿಂಗಳ ಖಾದ್ಯಗಳು ಲಭ್ಯ
ಪುತ್ತೂರು: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿದ್ದ ಹಲಸು ಮೇಳದ ಆಯೋಜಕ ಸಂಸ್ಥೆಗಳಲ್ಲಿ ಒಂದಾಗಿದ್ದ ಮರಿಕೆ ಸಾವಯವ ಮಳಿಗೆ ಇದೀಗ ಕುರುಂ ಕುರುಂ ತಿಂಡಿ ಮೇಳದೊಂದಿಗೆ ಗ್ರಾಹಕರ ಮನಸ್ಸು ಗೆಲ್ಲಲ್ಲು ಸಿದ್ಧವಾಗುತ್ತಿದೆ. ಎಪಿಎಂಸಿ ರಸ್ತೆಯಲ್ಲಿರುವ ಆದರ್ಶ ಆಸ್ಪತ್ರೆ ಮುಂಭಾಗದಲ್ಲಿನ ತ್ರಿನೇತ್ರ ಬಿಲ್ಡಿಂಗ್ನಲ್ಲಿ ಆ.2 ರಿಂದ ಆ.4 ರ ವರೆಗೆ ಭಟ್ ಆಂಡ್ ಭಟ್ ಸಹಯೋಗದೊಂದಿಗೆ ಮೂರು ದಿನಗಳ ಕ್ರೇಝೀ ಡೀಲ್ ಆಯೋಜಿಸಲಾಗಿದೆ.
ಕುರುಂ ಕುರುಂ ಮೇಳದಲ್ಲಿ ಗಾಣದ ತೆಂಗಿನ ಎಣ್ಣೆ ಮತ್ತು ಶೇಂಗಾ ಎಣ್ಣೆಯಲ್ಲಿ ತಯಾರಿಸಿದ ತಿಂಡಿಗಳು ಮಾತ್ರ ಲಭ್ಯವಿರಲಿದ್ದು, ಆಟಿ ತಿಂಗಳಿನ ಬಗೆ ಬಗೆಯ ಖಾದ್ಯಗಳನ್ನೂ ಈ ಮೇಳದಲ್ಲಿ ಸವಿಯಬಹುದಾಗಿದೆ. ಮೊದಲ ದಿನದೊಂದು ಸಮೋಸ, ಪನೀರ್, ಆಲೂ ಟಿಕ್ಕಿ, ಮಿರ್ಚಿ ಬಜ್ಜಿ, ಬ್ರೆಡೆ ಪಕೋಡ ಲಭ್ಯವಿರಲಿದ್ದು, ಎರಡನೇ ದಿನ ಸ್ಟಫ್ಡ್ ಮಿರ್ಚಿ ಬಜ್ಜಿ, ರಾಜ್ ಕಚೋರಿ, ಬಟಾಟೆ ಬೋಂಡಾ, ಆನಿಯನ್ ಪಕೋಡ, ಕಚೋರಿ ಇರಲಿದೆ. ಕೊನೆಯ ದಿನ ವಡಾ ಪಾವ್, ಬೆಂಡಿ ಕುರುಕುರಿ, ಮಿಕ್ಸ್ಡ್ ವೆಜ್ ಪಕೊರಾ, ಕಾರ್ನ್ ಚೀಸ್ ಬಾಲ್ಸ್ ಮತ್ತು ಚಿಲ್ಲಿ ಪನೀರ್ (ಡ್ರೈ, ಫ್ರೈಡ್) ಸವಿಯಬಹುದಾಗಿದೆ.
ತೆಂಗಿನ ಎಣ್ಣೆಯಿಂದ ತಯಾರಿಸಿದ ತಿಂಡಿಗಳು
ಚಕ್ಕುಲಿ, ಕಾರದ ಕಡ್ಡಿ, ತೆಂಗೊಳ್ಳು,ಮಿಕ್ಸ್ಚರ್,ನೇಂದ್ರ ಬಾಳೆಕಾಯಿ ಚಿಪ್ಸ್, ಪಚ್ಚ ಬಾಳೆ ಖಾರದ ಚಿಪ್ಸ್, ಬಾಳೆಕಾಯಿ ಮಸಾಲೆ ಚಿಪ್ಸ್,ಮಸಾಲೆ ಕಡ್ಲೆ,ತುಕ್ಕುಡಿ,ಮಸಾಲೆ ವಡೆ,ಕೋಡುಬಳೆ,ಮುರುಕು,ನಿಪ್ಪಟ್ಟು,ಶಂಕರಪೊಳೆ,ಉಂಡ್ಲಾಕಾಳು, ಹಲಸಿನ ಕಾಯಿ ಸೋಂಟೆ
ತುಪ್ಪದಲ್ಲಿ ತಯಾರಿಸಿದ ತಿಂಡಿಗಳು
ಮೈಸೂರ್ ಪಾಕ್,ಬಾಳೆ ಹಣ್ಣಿನ ಹಲ್ವಾ,ಹಳಸಿನ ಹಣ್ಣಿನ ಹಲ್ವಾ,ಹಲಸಿನ ಬೆರಟಿ,ಪೇರಳೆ ಹಲ್ವಾ,ಪಂಚರತ್ನ ಬರ್ಫಿ,ಗರಿಗರಿ ಲಾಡು,ನೇಂದ್ರ ಬಾಳೆ ಸಕ್ಕರೆ ಬೆರಟೆ,ಬಾದಾಮಿ ಪೂರಿ, ಖರ್ಜೂರ ಹಲ್ವಾ,ಗೋಧಿ ಹಲ್ವಾ,ತೊಡೆದೆವು,ಡ್ರ್ಯಾಗನ್ ಹಣ್ಣಿನ ಹಲ್ವಾ, ಪಪ್ಪಾಯಿ ಅನಾನಸ್ ಹಲ್ವಾ,ಕಡ್ಲೆಬೇಳೆ ಹೋಳಿಗೆ, ಕಾಯಿ ಹೋಳಿಗೆ
ಮರೆತು ಹೋದ ತಿಂಡಿ ತಿನಿಸುಗಳನ್ನು ನೆನಪಿಸುವ ಸಲುವಾಗಿ , ತಾಜಾ ತೆಂಗಿನ ಎಣ್ಣೆಯನ್ನು ತಯಾರಿಸಿದ ಕರುಂ ಕುರುಂ ತಿಂಡಿಗಳು ನಮ್ಮ ಮೇಳದಲ್ಲಿ ಸಿಗಲಿದೆ. ಜೊತೆಗೆ ಪುತ್ತೂರಿಗೆ ಹೊಸದಾದ ರಾಜಸ್ಥಾನಿ ಶೈಲಿಯ ಚಾಟ್ಸ್ ಗಳು, ಮರಿಕೆಯ ನೈಸರ್ಗಿಕ ಐಸ್ಕ್ರೀಮ್, ಸಾಂಪ್ರದಾಯಿಕ ಚರ್ಮುರಿ, ಕಣ್ಣೆದುರೇ ತಯಾರಾಗುವ ಬಿಸಿ ಬಿಸಿ ಚಿಪ್ಸ್, ಹಪ್ಪಳ , ಬೋಟಿ.
ಗೃಹ ಉಪಯೋಗಿ ವಸ್ತುಗಳು, ನರ್ಸರಿ ಗಿಡಗಳು ಲಭ್ಯವಾಗಲಿದೆ.
-ಸುಹಾಸ್ ಮರಿಕೆ, ಮಾಲಕರು