ಮೆಸ್ಕಾಂ ಪವರ್ ಮ್ಯಾನ್ ಚಿದಾನಂದರಿಗೆ ಕುಂಟ್ಯಾನ ಕುಟುಂಬಸ್ಥರಿಂದ ಗೌರವಾರ್ಪಣೆ

0

ಪೆರಾಬೆ: ಗ್ರಾಮದ ಕುಂಟ್ಯಾನ ತರವಾಡು ಮನೆಯ ಆವರಣದಲ್ಲಿ ಆಲಂಕಾರು ಮೆಸ್ಕಾಂ ಶಾಖೆಯ ಪವರ್ ಮ್ಯಾನ್ ಚಿದಾನಂದ ಇವರಿಗೆ ಜು.31 ರಂದು ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ, ಕಳೆದ 10 ವರ್ಷದಲ್ಲಿ ಸಹಾಯಕ ಪವರ್ ಮ್ಯಾನ್ ಆಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಾ ಮಳೆ, ಗಾಳಿ, ಸಿಡಿಲು, ಬಿಸಿಲು ಯಾವುದನ್ನೂ ಲೆಕ್ಕಿಸದೆ ಊರಿಗೆ ಬೆಳಕನ್ನು ನೀಡುವಲ್ಲಿ ಅಹರ್ನಿಶಿಯಾಗಿ ದುಡಿದ ಇವರ ಸೇವಾ ದಕ್ಷತೆ ಮತ್ತು ನಿಷ್ಠೆಯನ್ನು ಕೊಂಡಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತರವಾಡು ಮನೆಯ ಯಜಮಾನ ತಿಮ್ಮಪ್ಪ ಗೌಡ ಕುಂಟ್ಯಾನ, ಹಿರಿಯರಾದ ಬೆಳಿಯಪ್ಪ ಗೌಡ, ಉತ್ಸವ ಸಮಿತಿ ಅಧ್ಯಕ್ಷ ದಿವಾಕರ ಕುಂಟ್ಯಾನ, ಕಾರ್ಯದರ್ಶಿ ಯುವರಾಜ ಕುಂಟ್ಯಾನ ಸೇರಿ, ಸಮಿತಿಯ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here