ಸುದಾನ ಶಾಲೆಯಲ್ಲಿ ವಿಜ್ಞಾನ ಮಾದರಿಗಳ ಪ್ರದರ್ಶನ

0

ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಆ.1ರಂದು ವಿದ್ಯಾರ್ಥಿ ನಿರ್ಮಿತ ‘ವಿಜ್ಞಾನ ಮಾದರಿಗಳ ಪ್ರದರ್ಶನ’ ನಡೆಯಿತು.

ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಸುದಾನ ಆಡಳಿತ ಮಂಡಳಿಯ ಕಾರ್ಯದರ್ಶಿಗಳೂ ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕರು ಆಗಿರುವ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಶೋಧನಾತ್ಮಕ ಚಿಂತನೆಗಳು ಹೊಸ ಆವಿಷ್ಕಾರವಾಗಿ ಮೂಡಿ ಬರುತ್ತವೆ. ಇವು ಹಲವರಿಗೆ ಉಪಯುಕ್ತವಾದಾಗ ಸಂಶೋಧಕರು ಯಶಸ್ವಿಯಾಗುತ್ತಾರೆ. ಇತರರು ಮಾಡಿದ ಮಾದರಿಗಳನ್ನು ಅನುಕರಣೆ ಮಾಡುವುದಕ್ಕಿಂತ ಸ್ವಂತಿಕೆಯಲ್ಲಿ, ಹೊಸತನದಲ್ಲಿ ಮೂಡಿ ಬಂದರೆ ಅದು ಜನ ಉಪಯೋಗಿ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಮಾತನಾಡುತ್ತಾ, ನೂತನ ಆವಿಷ್ಕಾರಗಳು, ಕಠಿಣ ಪರಿಶ್ರಮ, ಮಾನವೀಯತೆ ಮತ್ತು ವಿಶಾಲ ಚಿಂತನೆಗಳೊಂದಿಗೆ ಮೂಡಿ ಬರಲಿ ಎಂದು ಶುಭ ಹಾರೈಸಿದರು. ‘ಅವನಿ’ ವಿಜ್ಞಾನ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಮಾನ್ವಿ ಡಿ (9ನೇ)ಸ್ವಾಗತಿಸಿ, ಮಿಥುನ್ ಪಿ ಪಿ (10ನೇ) ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಸುಮಾರು 80ಕ್ಕಿಂತಲೂ ಅಧಿಕ ವಿಜ್ಞಾನ ಮಾದರಿಗಳು ಪ್ರದರ್ಶಿತಗೊಂಡವು. ವಿಜ್ಞಾನ ಶಿಕ್ಷಕರಾದ ಶ್ಯಾಮಲಾ, ರೀನಾ, ಪ್ರತಿಮಾ ಮತ್ತು ಪೂಜ ತೀರ್ಪುಗಾರರಾಗಿ ಸಹಕರಿಸಿದರು. ರೇಖಾಮಣಿ, ಶಾರದಾ ನೇತೃತ್ವ ವಹಿಸಿದ್ದ ಕಾರ್ಯಕ್ರಮವನ್ನು ಅವನಿ ವಿಜ್ಞಾನ ಸಂಘವು ಆಯೋಜಿಸಿತ್ತು.

LEAVE A REPLY

Please enter your comment!
Please enter your name here