ಪುತ್ತೂರು: ರಸ್ತೆ ಬದಿಯಲ್ಲಿದ್ದ ಹಾಸಿಗೆಯೊಂದು ಮೃತದೇಹ ಸುತ್ತಿಟ್ಟು ಬೀಸಾಡಿರಬಹುದೆಂಬ ಆತಂಕದ ಸೃಷ್ಟಿಸಿದ ಘಟನೆ ಸೇಡಿಯಾಪು ಬಳಿಯ ಕಡಂಬು ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಸುತ್ತಿಟ್ಟ ಹಾಸಿಗೆಯನ್ನು ಬಿಚ್ಚಿ ಊಹಾಪೋಹಗಳಿಗೆ ತೆರೆ ಎಳೆದ ಘಟನೆ ಆ.2 ರಂದು ನಡೆದಿದೆ.
ಸೇಡಿಯಾಪು ಕಡಂಬು ಎಂಬಲ್ಲಿ ರಸ್ತೆ ಬದಿ ಪೊದೆಯಲ್ಲಿ ಹಾಸಿಗೆಯೊಂದು ಸುತ್ತಿಟ್ಟ ರೀತಿಯಲ್ಲಿ ಕಂಡು ಬಂದಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಯಾರೋ ಕೊಲೆ ಮಾಡಿ ಹಾಸಿಗೆಯಲ್ಲಿ ಸುತ್ತಿ ಬೀಸಾಡಿರಬಹುದೆಂಬ ಊಹಾಪೋಹ ಹರಿದಾಡಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಾಸಿಗೆಯನ್ನು ಪರಿಶೀಲಿಸಿದ್ದಾರೆ. ಹಾಸಿಗೆಗೆ ಸುತ್ತಿದ ದಾರವನ್ನು ಬಿಚ್ಚಿದಾಗ ಊಹಾಪೋಹಗಳು ಸುಳ್ಳಾಗಿದೆ.