ಬಲ್ನಾಡು ಸ.ಹಿ.ಪ್ರಾ ಶಾಲೆಯಲ್ಲಿ ಆಟಿದಕೂಟ ಕಾರ್ಯಕ್ರಮ

0

ಪುತ್ತೂರು: ಬಲ್ನಾಡು ಸ.ಹಿ.ಪ್ರಾ ಶಾಲೆಯಲ್ಲಿ ಎಸ್‌ ಡಿ ಎಮ್‌ ಸಿ ಸಮಿತಿ,ಹಿರಿಯ ವಿದ್ಯಾರ್ಥಿ ಸಂಘ,ಪೋಷಕರ ವತಿಯಿಂದ ಆಟಿದಕೂಟ ಕಾರ್ಯಕ್ರಮ ಆ.2ರಂದು ನಡೆಯಿತು.

ನಾರಾಯಣ ಗೌಡ ಕುಕ್ಕುತ್ತಡಿ ಮಾತನಾಡಿ, ಮಕ್ಕಳಿಗೆ ಆಟಿಕೂಟದ ಮಹತ್ವದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು,ಪೂರ್ಣಿಮಾ ಕೋಡಿಯಾಡ್ಕ, ನಾರಾಯಣ ಪಾಟಾಳಿ,ರಾಧಾಕೃಷ್ಣ ಪೂಜಾರಿ ನಾಗಗದ್ದೆ, ನವೀನ್ ಕರ್ಕೇರಾ ಮಾತನಾಡಿದರು.

ಸಭಾಕಾರ್ಯಕ್ರಮದಲ್ಲಿ ಪುತ್ತೂರು ನಗರಸಭಾ ಸದಸ್ಯೆ ಪೂರ್ಣಿಮಾ ಕೋಡಿಯಡ್ಕ, ಹಿರಿಯ ವಿದ್ಯಾರ್ಥಿ ಮತ್ತು ವಿದ್ಯಾಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ,ಸಂಘದ ಉಪಾಧ್ಯಕ್ಷ ಮತ್ತು ಬಲ್ನಾಡು ಗ್ರಾ.ಪಂ ಸದಸ್ಯ ಬಾಲಸುಬ್ರಹ್ಮಣ್ಯ ಕೋಟ್ಯಾನ್,ಸಂಘದ ಖಜಾಂಚಿ ನಾರಾಯಣ ಗೌಡ ಕುಕ್ಕುತ್ತಡಿ, ಶಾಲಾ SDMC ಅಧ್ಯಕ್ಷ ರಾಧಾಕೃಷ್ಣ ಪೂಜಾರಿ ನಾಗಗದ್ದೆ,ಉಪಾಧ್ಯಕ್ಷೆ ಯಶೋಧ ಕಟ್ಟೆಮನೆ,ಪ್ರಾಥಮಿಕ ಕೃಷಿಪತ್ತಿನ ಸಂಘ ಬಲ್ನಾಡು ಇದರ ನಿರ್ದೇಶಕ ನವೀನ್ ಕರ್ಕೇರಾ, ರುಕ್ಮಯ ಕುಲಾಲ್ ಚಿಟ್ ಫಂಡ್ ಸಂಸ್ಥೆ, ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ ಎಂ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ಭವಾನಿ ಎಂ ಸ್ವಾಗತಿಸಿ, ಮಂಜಪ್ಪ ಹೆಚ್‌ ಆರ್ ಇವರು ವಂದಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.ಅತಿಥಿ ಶಿಕ್ಷಕಿ ಪವಿತ್ರ ನಿರೂಪಿಸಿದರು.

LEAVE A REPLY

Please enter your comment!
Please enter your name here