ಬಂದೂಕು ಠಾಣೆಯಲ್ಲಿರಿಸಲು ಮನವಿ
ಕಡಬ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2025ರ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಆ.17ರಂದು ನಡೆಯಲಿದ್ದು, ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಂದೂಕು ಹೊಂದಿರುವರು ತಮ್ಮ ಬಂದೂಕುಗಳನ್ನು ಠಾಣೆಯಲ್ಲಿ ಇರಿಸುವಂತೆ ಕಡಬ ತಾಲೂಕು ದಂಡಾಧಿಕಾರಿ ಪ್ರಭಾಕರ ಖಜೂರೆ ಅವರು ಸೂಚನೆ ನೀಡಿದ್ದಾರೆ.
ಸಮಯಾವಕಾಶದ ಕೊರತೆ ಇರುವುದರಿಂದ ಎಲ್ಲಾ ಬಂದೂಕು ಪರವಾನಿಗೆದಾರರು ಎರಡನೇ ಜ್ಞಾಪನಕ್ಕೆ ಆಸ್ಪದ ನೀಡದಂತೆ ಈ ಕೂಡಲೇ ತಮ್ಮ ಬಂದೂಕುಗಳನ್ನು ಕಡಬ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸುವಂತೆ ಈ ಮೂಲಕ ಸೂಚಿಸಿದ್ದಾರೆ.