ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 24 ಮಂದಿಯ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. ಇದರ ಮುಖಾಂತರ ಶಾಸಕರ ಮಾರ್ಗದರ್ಶನದಲ್ಲಿ ರೂ.60ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಪುತ್ತೂರಿನ ಮೂಲೆ ಮೂಲೆಯಿಂದ ದೇವಸ್ಥಾನದ ಕಾರ್ಯಗಳಲ್ಲಿ ಭಾಗವಹಿಸಿವಂತೆ ಮಾಡುವುದು ಭಕ್ತ ಸಮಿತಿಯ ಮುಖ್ಯ ಉದ್ದೇಶ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆ.3ರಂದು ನಡೆದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಭಕ್ತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು, ಶಾಸಕರ ತೀರ್ಮಾನದಂತೆ ದೇವಸ್ಥಾನದ ಅಭಿವೃದ್ಧಿ ನಡೆಯುವುದಿಲ್ಲ. ಇದಕ್ಕಾಗಿಯೇ 54 ಗ್ರಾಮಗಳಲ್ಲಿ ಸಮಿತಿ ಮಾಡಿ ಭಕ್ತರ ಸಲಹೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಸಮಿತಿಗೆ 10ಸಾವಿರಕ್ಕೂ ಅಧಿಕ ಮಂದಿ ಸದಸ್ಯರ ಸೇರ್ಪಡೆ ಮಾಡುವ ಗುರಿಯಿದೆ. ತಿಂಗಳಿಗೊಮ್ಮೆ ಎಲ್ಲಾ ಸಮಿತಿಗಳ ಸಭೆ ನಡೆಯಲಿದ್ದು ಸದಸ್ಯರು ಅದರಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು. ದೇವಸ್ಥಾನದ ಕಾರ್ಯದಲ್ಲಿ ರಾಜಕೀಯವಿಲ್ಲ. ಯಾವುದೇ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ನಮ್ಮ ಉದ್ದೇಶ ಅಭಿವೃದ್ಧಿ ಮಾತ್ರ. ಏನೇ ತಪ್ಪಾದರೂ ನಮ್ಮ ಗಮನಕ್ಕೆ ತಂದಾಗ ಸರಿಪಡಿಸಿಕೊಳ್ಳಲಾಗುವುದು. ಭಕ್ತಾದಿಗಳನ್ನು ಸೇರಿಸಿಕೊಂಡು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು. ಜಾತ್ರೆಯ ಸಂದರ್ಭದಲ್ಲಿ ದೇವರು ಕಟ್ಟೆ ಪೂಜೆ ಸ್ವೀಕರಿಸುವ ಕಟ್ಟೆಗಳು ಪರಿಶುದ್ಧವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕಾಗಿ ಎಲ್ಲಾ ಕಟ್ಟೆಯವರ ಸಭೆ ನಡೆಸಿ ಕಟ್ಟೆ ಯಾವ ರೀತಿ ಇರಬೇಕು ಎಂದು ತಿಳಿಸಲಾಗುವುದು. ದೇವಸ್ಥಾನದ ಸುತ್ತ ಶಿಲಾಮಯ ಕಟ್ಟೆ ನಿರ್ಮಾಣವಾಗಲಿದ್ದು ಇದಕ್ಕೆ ದಾನಿಗಳು ಮುಂದಾಗಿದ್ದಾರೆ. ಕೆರೆ ದುರಸ್ಥಿ, ರಥಬೀದಿ, ಗೋಶಾಲೆ, ಅಯ್ಯಪ್ಪ ಗುಡಿ ಸ್ಥಳಾಂತರ ನಡೆಯಲಿದೆ ಎಂದು ತಿಳಿಸಿದರು.
ಸಮಿತಿ ರಚನೆ:
ಸಭೆಯಲ್ಲಿ ಸಂಪ್ಯ ಭಕ್ತ ಸಮಿತಿಯನ್ನು ರಚನೆ ಮಾಡಲಾಗಿದ್ದು ಗೌರವಾಧ್ಯಕ್ಷರಾಗಿ ಶ್ರೀಕೃಷ್ಣ ಭಟ್, ಅಧ್ಯಕ್ಷರಾಗಿ ಜಯಕುಮಾರ್ ಆರ್. ನಾಯರ್, ಉಪಾಧ್ಯಕ್ಷರಾಗಿ ಜನಾರ್ದನ ಗೌಡ ಕೊಲ್ಯ, ಕಾರ್ಯದರ್ಶಿಯಾಗಿ ನಾಗೇಶ್ ಸಂಪ್ಯ, ಜೊತೆ ಕಾರ್ಯದರ್ಶಿಯಾಗಿ ನವೀನ್ ಗೌಡ ಕುಕ್ಕಾಡಿ, ಸದಸ್ಯರಾಗಿ ಡಾ.ಸುರೇಶ್ ಪುತ್ತೂರಾಯ, ಲಕ್ಷ್ಮಣ್ ಬೈಲಾಡಿ, ರವಿಚಂದ್ರ ಆಚಾರ್ಯ, ವಿನ್ಯಾಸ್ ಯು.ಎಸ್., ಪ್ರೇಮ ಸಪಲ್ಯ, ಆದರ್ಶ ಮೊಟ್ಟೆತ್ತಡ್ಕ, ಮೀನಾಕ್ಷಿ ಸೇಸಪ್ಪ ಗೌಡ ನೀರ್ಕಜೆ, ಉದಯ ಕುಮಾರ್ ರೈ, ಹರಿಣಿ ಪುತ್ತೂರಾಯ, ಉಮೇಶ್ ಎಸ್.ಕೆ., ಸಂತೋಷ್ ಕುಮಾರ್ ಮುಕ್ರಂಪಾಡಿ, ತೇಜಸ್ ಸಂಪ್ಯ, ಜಯಂತ ಶೆಟ್ಟಿ ಕಂಬಳತ್ತಡ್ಡ, ವಿಜಯ ಬಿ.ಎಸ್., ಶಶಿಕಲಾ ನಿರಂಜನ ರೈ, ರವಿ ಬೈಲಾಡಿ, ರವಿನಾಥ ಬೈಲಾಡಿ, ಸುರೇಶ್ ಉದಯಗಿರಿ, ಜಯರಾಮ ಟಿ ಪಂಜಳ, ಸುರೇಶ್ ಮುಕ್ವೆ, ನಾರಾಯಣ ನಾಕ್ ಪಂಜಳ, ಉಮೇಶ್ ಕುಕ್ಕಾಡಿ, ಸಂದೀಪ್ ಸಂಪ್ಯ, ಅಜಿತ್ ಗೌಡ ಬೈಲಾಡಿ, ಮೋಹನ ನಾಯ್ಕ್ ಪಂಜಳ, ರಾಮಣ್ಣ ನಾಯ್ಕ್ ಪಂಜಳ, ರಾಮಚಂದ್ರ ಪುಚ್ಚೇರಿ, ರೋಹಿತ್ ಪಂಜಳ, ಯಧುಕುಮಾರ್, ರವೀಂದ್ರ ಎಸ್ ಗೌಡ., ಭರತ್ ಆಚಾರ್ಯ, ಮೋಹನ ಆಚಾರ್ಯ, ಉಮೇಶ್ ಎಸ್ ಉದಯಗಿರಿ ಹಾಗೂ ಸುರೇಶ್ ಎಸ್ ಉದಯಗಿರಿಯವರನ್ನು ಆಯ್ಕೆಮಾಡಲಾಗಿದ್ದು ಪಂಜಿಗುಡ್ಡೆ ಈಶ್ವರ ಭಟ್‌ರವರು ಸಮಿತಿ ಪದಾಧಿಕಾರಿ, ಸದಸ್ಯರನ್ನು ಘೋಷಣೆ ಮಾಡಿದರು.
ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸಂಪ್ಯ ಭಕ್ತ ಸಮಿತಿ ಪದಾಧಿಕಾರಿಗಳನ್ನು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಗೌರವಿಸಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೆಡೇಕರ್, ಮಹಾವೀರ ಆಸ್ಪತ್ರೆಯ ಮ್ಹಾಲಕ ಡಾ.ಅಶೋಕ್ ಪಡಿವಾಳ್, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಸುರೇಶ್ ಪುತ್ತೂರಾಯ ಸ್ವಾಗತಿಸಿ, ವಂದಿಸಿದರು.
ಉಚಿತ ವೈದ್ಯಕೀಯ ಶಿಬಿರ ನಡೆಸುವುದು ಸುಲಭದ ಕೆಲಸವಲ್ಲ. ಇದೂ ಒಂದು ದೇವರ ಸೇವೆಯಾಗಿದೆ. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನವು ರಾಜ್ಯದಲ್ಲಿ ಅತೀ ಹೆಚ್ಚು ಉಚಿತ ವೈದ್ಯಕೀಯ ಶಿಬಿರ ನಡೆದ ದೇವಸ್ಥಾನವಾಗಿದೆ ಎಂದು ಎದೆತಟ್ಟಿ ಹೇಳಬಹುದು. ಬಡವರಿಗೆ ಸಾಕಷ್ಟು ಸಹಾಯ ನೀಡುತ್ತಿರುವ ಡಾ. ಸುರೇಶ್ ಪುತ್ತೂರಾಯರ ಮೂಲಕ ಉಚಿತವಾಗಿ ಶಿಬಿರವು ನಡೆಯುತ್ತಿದ್ದು ಇಂತಹ ವೈದ್ಯರು ದೊರೆತಿರುವುದು ನಮ್ಮ ಸೌಭಾಗ್ಯ.
-ಪಂಜಿಗುಡ್ಡೆ ಈಶ್ವರ ಭಟ್, ಅಧ್ಯಕ್ಷರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ