ಜಾತಿ, ಧರ್ಮಾತೀತವಾಗಿರುವ ನಮ್ಮ ಆಚರಣಾ ಪದ್ಧತಿಗಳು ನಮ್ಮ ಜೀವನವನ್ನು ಗೆಲ್ಲಿಸುತ್ತದೆ: ದುರ್ಗಾಪ್ರಸಾದ್ ರೈ ಕುಂಬ್ರ
ಪುತ್ತೂರು: “ನಮ್ಮ ತುಳು ಸಂಸ್ಕೃತಿಯಲ್ಲಿ ನಾವು ಆಚರಿಸಿಕೊಂಡು ಬರುತ್ತಿರುವ ಆಚರಣೆಗಳಿಗೆ ಅದರದ್ದೇ ಆದ ಮೌಲ್ಯವಿದ್ದು, ಅಂತಹ ಆಚರಣೆಗಳು ಜಾತಿ ಧರ್ಮ, ಮೇಲು-ಕೀಳು ಎಂಬುದನ್ನು ಮೀರಿ ನಾವು ಮುಂದುವರೆಸಿಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು,ಇದು ಯುವ ಜನರ ಜೀವನವನ್ನು ಗೆಲ್ಲಿಸುತ್ತದೆ” ಎಂದು ವಕೀಲರಾದ ದುರ್ಗಾಪ್ರಸಾದ್ ಕುಂಬ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆದ ಆಟಿ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಮಾತಾ ಸಂಸ್ಥೆಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿ, ಪ್ರಾಸ್ತವಿಕ ನೆಲೆಯಲ್ಲಿ ಮಾತನಾಡಿ, ಆಟಿ ಕೂಟದ ಆಯೋಜನೆಯ ಹಿಂದಿರುವ ವೈಚಾರಿಕತೆಯನ್ನು ವಿವರಿಸಿದರು.

ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ತುಳು ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆ-ತೊಡುಗೆಯ ಜೊತೆಗೆ ತಯಾರಿಸಿದ ಸಾಂಪ್ರದಾಯಿಕ ಅಡುಗೆಯನ್ನು ಸಹಭೋಜನದಲ್ಲಿ ಸ್ವೀಕರಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಹಾಗೂ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ದುರ್ಗಾಪ್ರಸಾದ್ ರೈ ಕುಂಬ್ರ ರವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕಿ ರಮ್ಯ ಭಾಗ್ಯೇಶ್ ರೈ ನಿರೂಪಿಸಿದರು.ತರಬೇತುದಾರ ಚೇತನ ಸತೀಶ್ ವಂದಿಸಿದರು.
ಈ ಆಟಿ ಕೂಟದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ಮಂಡಳಿ,ತರಬೇತುದಾರರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.