ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ಸ್ವಾತಂತ್ರ್ಯದ ಓಟ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯದ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಶೇಷವಾದ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.


ರಾಮಕುಂಜ ಗ್ರಾ.ಪಂ.ಸದಸ್ಯ, ಮಾಜಿ ಅಧ್ಯಕ್ಷರೂ ಆದ ಪ್ರಶಾಂತ ಆರ್.ಕೆ. ಉದ್ಘಾಟಿಸಿ ಮಾತನಾಡಿ, ಭಾರತೀಯರಿಗೆ ಸ್ವಾತಂತ್ರ್ಯವು ಅಷ್ಟು ಸುಲಭವಾಗಿ ಲಭಿಸಿಲ್ಲ. ಬಹಳಷ್ಟು ಜನರು ತಮ್ಮ ಸಂಪೂರ್ಣ ಜೀವನವನ್ನೇ ಸ್ವಾತಂತ್ರ್ಯ ಹೋರಾಟದಲ್ಲಿ ಸಮರ್ಪಣೆ ಮಾಡಿದ್ದಾರೆ. ಇಂತಹ ಸಮರ್ಪಣೆಯನ್ನ ಮತ್ತೆ ಮತ್ತೆ ಸ್ಮರಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರದ ಮಹತ್ವದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವಂತಹ ಈ ಓಟವು ಸಫಲವಾಗಲಿ ಎಂದು ಹೇಳಿ ಶುಭ ಹಾರೈಸಿದರು.


ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮೀನಾರಾಯಣರಾವ್ ಅತೂರು ಮಾತನಾಡಿ, ಯುವ ಜನರು ದೈಹಿಕವಾಗಿ ಬಲಶಾಲಿಯಾಗಬೇಕು. ಫಿಟ್ ಇಂಡಿಯಾ ಪರಿಕಲ್ಪನೆಯಂತೆ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ದೈಹಿಕವಾಗಿ ಸಧೃಢರಾಗುವಂತೆ ಮಾಡುತ್ತದೆ. ಸ್ವಾತಂತ್ರ್ಯದ ರಕ್ಷಣೆಯನ್ನು ಸಧೃಡ ಯುವಸಮಾಜ ಮಾತ್ರವೇ ಮಾಡಲು ಸಾಧ್ಯ ಎಂದು ಹೇಳಿದರು. ಪ್ರಾಂಶುಪಾಲ ಚಂದ್ರಶೇಖರ ಕೆ., ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಕೆ.ವಂದಿಸಿದರು. ಉಪನ್ಯಾಸಕರು ಓಟ ಸಾಗುವ ದಾರಿಯುವುದಕ್ಕೂ ಸಹಕರಿಸಿದರು.

LEAVE A REPLY

Please enter your comment!
Please enter your name here