ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಆಟಿ ತಿಂಗಳ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿದಿಂದ `ಆಟಿದ ಅಟ್ಟಣೆ- ತುಳುವ ಸಂಸ್ಕೃತಿನ್ ಒರಿಪುಗು’ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ವಿದ್ಯಾರ್ಥಿಗಳು ಇಂದ್ರಪ್ರಭ ಸಭಾಂಗಣವನ್ನು ತುಳುವ ಸಂಸ್ಕೃತಿಗೆ ಮೆರುಗನ್ನು ನೀಡುವ ರೀತಿಯಲ್ಲಿ ಅಲಂಕರಿಸಿದರು. ವಿಪರೀತ ಮಳೆಯ ಕಾರಣ ಆರೋಗ್ಯವನ್ನು ಕಾಪಾಡಿಕೊಳ್ಳುವ ಆಟಿ ತಿಂಗಳಿನಲ್ಲಿ ಮಾಡುವ ವಿವಿಧ ಖಾದ್ಯಗಳನ್ನು ಮನೆಗಳಿಂದ ತಯಾರಿಸಿ ತಂದು, ಅವುಗಳನ್ನು ಒಪ್ಪ ಓರಣವಾಗಿ ಜೋಡಿಸಿ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಗೆ ತಿನಿಸುಗಳನ್ನು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿಗಳು ತುಳುನಾಡಿನ ಆಚರಣೆಗಳ ಬಗ್ಗೆ ಹಾಗೂ ಆಟಿ ತಿಂಗಳಿನ ವಿಶೇಷತೆಯ ಕುರಿತು ವಿವರಿಸಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕರುಣಾಕರ ಸುವರ್ಣ, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.