ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ದಿ.ಡೆನ್ನಿಸ್ ಪಿಂಟೊ(ರೊಕೆಟ್)ರವರ ಪತ್ನಿ ಮೋಲಿ ಪಿಂಟೊ(73ವ.)ರವರು ಹೃದಯಾಘಾತದಿಂದ ಆ.4 ರಂದು ರಾತ್ರಿ ಸ್ವಗೃಹವಾದ ನೆಲ್ಲಿಕಟ್ಟೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಅನಿಲ್ ಪಿಂಟೊ ನೈಜೀರಿಯಾ, ಸುನಿಲ್ ಪಿಂಟೊ ಮಂಗಳೂರು, ಪುತ್ರಿಯರಾದ ಅನಿತಾ ಡಿ’ಸೋಜ ಅಬುದಾಬಿ, ಸುನೀತಾ ಡಿ’ಸೋಜ ನೆಲ್ಲಿಕಟ್ಟೆ, ವಿನೀತಾ ಲೆವಿಸ್ ಕುವೈಟ್, ಅಳಿಯಂದಿರಾದ ಆಲ್ವಿನ್ ಡಿ’ಸೋಜ ಅಬುದಾಬಿ, ನಿವೃತ್ತ ಸೈನಿಕ ಎಡ್ವರ್ಡ್ ಡಿ’ಸೋಜ ನೆಲ್ಲಿಕಟ್ಟೆ, ಲ್ಯಾನ್ಸಿ ಲೆವಿಸ್ ನೈತಾಡಿ, ಸೊಸೆಯಂದಿರಾದ ಜೆನೆವಿವ್ ಪಿಂಟೊ ನೈಜೀರಿಯಾ, ಸಿಲ್ವಿಯಾ ಪಿಂಟೊ ಮಂಗಳೂರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಹುಟ್ಟುಹಬ್ಬದ ದಿನದಂದೇ ಸಾವು
ಮೃತರು ಆ.4 ರಂದು ರಾತ್ರಿ 73ನೇ ಹುಟ್ಟುಹಬ್ಬವನ್ನು ತಮ್ಮ ಕುಟುಂಬದ ಜೊತೆಗೆ ಆಚರಿಸಿದ್ದು, ಸ್ವಲ್ಪ ಸಮಯದ ಬಳಿಕ ಅವರು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ.