ಪುತ್ತೂರು: ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ 2025ರ ಪೂರ್ವಭಾವಿ ಸಭೆಯು ಆ.03 ರಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ ರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕ ರವೀಂದ್ರ ಮಣಿಲತ್ತಾಯ, ಮೋಹನ್ದಾಸ್ ಶೆಟ್ಟಿ ನೂಜಿಬೈಲು, ದೀಪಕ್ ಕುಮಾರ್ ಮುಂಡ್ಯ, ರಮಾನಂದ ಕೆ, ಬಾಬು ಪಾಟಾಳಿ ಆರ್, ಎಂ ಪ್ರದೀಪ್ ರೈ ಮೇನಾಲ, ನಾಗಪ್ಪ ಮಾಸ್ಟರ್ ಬೊಮ್ಮೆಟ್ಟಿ, ಎಸ್ ಎ ಮಣಿಯಾಣಿ, ಜಯಚಂದ್ರ ಸೇರಾಜೆ, ಸುಭಾಸ್ ಚಂದ್ರ ರೈ ಕರ್ನೂರು, ಆನಂದ ರೈ ಎಸ್, ನಾರಾಯಣ ರೈ, ಗಣೇಶ್ ಎಂ, ಅಶ್ವಿತ್ ಎಂ, ಗೋಪಾಲ ಕೃಷ್ಣ ಎಂ ಮುಂಡ್ಯ, ಜಯಾನಂದ್ ಕೆ, ಪೂರ್ಣ ಚಂದ್ರ ರೈ, ಆನಂದ ಗೌಡ, ಸತೀಶ್ ಸುರುಳಿಮೂಲೆ, ಪ್ರವೀಣ್ ಬಸಿರಡ್ಕ, ಗಿರೀಶ್ ಐಯ್ಯರ್, ಶ್ರೀನಿವಾಸ ಹಿರಿಯಾಣ, ರಾಮಣ್ಣ ನಾಯ್ಕ್ ಬಸಿರಡ್ಕ, ದೇವಪ್ಪ ತಲೆಬೈಲು, , ಜಯಂತ ರೈ, ಬಾಬು ಪಾಟಾಳಿ ಮೊದಲಾದವರು ಉಪಸ್ಥಿತರಿದ್ದರು.