ಪುತ್ತೂರು: ತಾಲೂಕು ಮಹಿಳಾ ಒಕ್ಕೂಟ, ಲಯನ್ಸ್ ಕ್ಲಬ್ ಪುತ್ತೂರು, ನವ್ಯಶ್ರೀ ಮಹಿಳಾ ಮಂಡಲ, ವನಿತಾ ಸಮಾಜ ಹಾರಾಡಿ ಇವರ ಆಶ್ರಯದಲ್ಲಿ ಆಟಿದ ಪೊರ್ಲು ಕಾರ್ಯಕ್ರಮ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಆ.4 ರಂದು ನಡೆಯಿತು.

ನಗರ ಸಭೆಯ ಅಧ್ಯಕ್ಷೆ ಲೀಲಾವತಿ ಚೆನ್ನಮಣೆ ಆಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಸಿಡಿಪಿಓ ಹರೀಶ್ ಸಂದರ್ಭೋಚಿತವಾಗಿ ಮಾತಾಡಿ ಇಲಾಖೆಯ ಸೌಲಭ್ಯಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಲಯನ್ ಉಷಾ ನಾಯಕ್ ಶುಭ ಹಾರೈಸಿದರು. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತ ರಿಗೆ ವತ್ಸಲಾ ರಾಜ್ನಿ ಬಹುಮಾನ ವಿತರಿಸಿದರು. ರೇಣುಕಾ ಮತ್ತು ವಿನಯ ಪ್ರಾರ್ಥಸಿದರು. ಮೋಹಿನಿ ದಿವಾಕರ್ ಸ್ವಾಗತಿಸಿದರು. ಲಯನ್ಸ್ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು , ಹರಿಣಾಕ್ಷಿ .ಜೆ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.