ಪೆರ್ನಾಜೆ: ಬರಹಗಾರ, ಜೇನು ಗಡ್ಡ ಜೇನು ಕೃಷಿಕರಾದ ಕುಮಾರ್ ಪೆರ್ನಾಜೆ-ಸೌಮ್ಯ ದಂಪತಿ ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಸಾಧನೆಗಾಗಿ ‘ಆದರ್ಶ ಜೇನು ಕೃಷಿ ದಂಪತಿ’ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ನಾರಾಯಣ್ ರೈ ಕುಕ್ಕುವಳ್ಳಿ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷ ಎಚ್. ಭೀಮ್ರಾವ್ ವಾಶ್ಟರ್ ಕೋಡಿಪಾಳ ಸುಳ್ಯ ಪ್ರಶಸ್ತಿ ಪ್ರದಾನ ಮಾಡಿದರು ಶಾಲು ಮಾಲೆ ಸ್ಮರಣಿಕೆ ಅಭಿನಂದನಾ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಆ 3ರಂದು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ, ಚಂದನ ಸಾಹಿತ್ಯ ವೇದಿಕೆಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ-೨೦೨೫ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕುಮಾರ್ ಪೆರ್ನಾಜೆ ಮಾತನಾಡಿ ಛಲ ಮತ್ತು ಹಠ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದೆಂದು ಹೇಳಿದರು .
ಸಭಾಧ್ಯಕ್ಷತೆಯನ್ನು ಎಚ್ ಭಿಮ್ರಾವ್ ವಾಸ್ಟರ್ ಕೊಡಿಪಾಳ ವಹಿಸಿದ್ದರು. ಮೋಹನ್ ನಂಗಾರ್ (ನಿವೃತ್ತ ತಾಂತ್ರಿಕ ಕೃಷಿ ಅDiಕಾರಿ ಸುಳ್ಯ) ಕಾರ್ಯಕ್ರಮ ಉದ್ಘಾಟಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರಭಾಕರ್ ಶಿಶಿಲ ವಹಿಸಿದ್ದರು. ಜೈನ ಸೇವಾಶ್ರಮ ಅಜ್ಜಾವರ ದೇವರ ಕಳೆಯ ಸಂಚಾಲಕ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ ಸಾಹಿತಿ ಹಾ.ಮ ಸತೀಶ್ ಬೆಂಗಳೂರು ಕೃತಿ ಬಿಡುಗಡೆ ಮಾಡಿದರು.ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಾವಿತ್ರಿ ದೊಡ್ಡ ಮನೆ ಐವರ್ನಾಡು, ಪೆರುಮಾಳ್ ಲಕ್ಷ್ಮಣ್, ಸವಿತಾ ಕೋಡಂದೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.