ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಸೆ.7ರಂದು ಮಿತ್ತೂರು ದಾರುಲ್ ಇರ್ಷಾದ್ ಸಂಸ್ಥೆಯಲ್ಲಿ ನಡೆಯಲಿದ್ದು ಸಾಹಿತ್ಯೋತ್ಸವದ ಪ್ರಾದೇಶಿಕ ಸ್ವಾಗತ ಸಮಿತಿ ರಚನಾ ಸಭೆ ಆ.೩ರಂದು ಮಿತ್ತೂರು ಕೆ.ಜಿ.ಎನ್‌ನಲ್ಲಿ ನಡೆಯಿತು. ಝೈನುಲ್ ಉಲಮಾ ಮಾಣಿ ಉಸ್ತಾದ್ ದುವಾ ನಿರ್ವಹಿಸಿದರು. ಸಿದ್ದೀಕ್ ಹಾಜಿ ಕಬಕ ಹಾಗೂ ಯೂಸುಫ್ ಸಯೀದ್ ನೇರಳಕಟ್ಟೆ ವಿಷಯ ಮಂಡಿಸಿದರು.
ಸಭೆಯಲ್ಲಿ ಡಿವಿಷನ್ ಸಾಹಿತ್ಯೋತ್ಸವದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಲಹಾ ಸಮಿತಿ ನಾಯಕರಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯದ್ ಸಾಬಿತ್ ಮುಯೀನಿ ಸಖಾಫಿ ತಂಙಳ್, ಹಂಝ ಮದನಿ ಮಿತ್ತೂರು, ಅಬೂದುಜಾನ ಸಖಾಫಿ ಕೊಡಿಪ್ಪಾಡಿ, ಖಾಸಿಂ ಹಾಜಿ ಪಾಟ್ರಕೋಡಿ, ಹಸೈನಾರ್ ಹಾಜಿ ಮಜ್ಮಾ, ಇಸ್ಮಾಈಲ್ ಹಾಜಿ ಹಸನ್ ನಗರ ಅವರನ್ನು ಆಯ್ಕೆ ಮಾಡಲಾಯಿತು.
ಚೇರ್‌ಮೆನ್ ಆಗಿ ಯೂಸುಫ್ ಸಯೀದ್ ನೇರಳಕಟ್ಟೆ, ಜನರಲ್ ಕನ್ವೀನರ್ ಆಗಿ ಸಿದ್ದೀಕ್ ಹಾಜಿ ಕಬಕ, ಹಾಗೂ ಫೈನಾನ್ಸಿಯಲ್ ಕನ್ವೀನರ್ ಆಗಿ ಸಮೀರ್ ಕೊಡಿಪ್ಪಾಡಿ ಅವರನ್ನು ಆಯ್ಕೆ ಮಾಡಲಾಯಿತು. ವೈಸ್ ಚೇರ್‌ಮೆನ್‌ಗಳಾಗಿ ಅಬ್ಬಾಸ್ ಮೆಸ್ಕಾಂ, ಹಮೀದ್ ಮೌಲಾ, ಯೂಸುಫ್ ಹಾಜಿ ಸೂರಿಕುಮೇರು, ಸ್ವಾಲಿಹ್ ಮುರ, ಶಾಹುಲ್ ಹಮೀದ್ ಕಬಕ ಆಯ್ಕೆಯಾದರು. ಕನ್ವೀನರ್‌ಗಳಾಗಿ ಕರೀಂ ನೆಲ್ಲಿ, ಹೈದರ್ ಡೆಂಬಳೆ, ಶಾಹುಲ್ ಹಮೀದ್ ಪರ್ಲೋಟು, ಮಜೀದ್ ಕಬಕ, ಉಸ್ಮಾನ್ ಹಾಜಿ ಪದಂಜಾರ್, ಫುಡ್ ಉಸ್ತುವಾರಿಗಳಾಗಿ ಬಶೀರ್ ಕರಿಮಜಲ್, ಫತಾವುಲ್ಲಾ ಕಬಕ, ಯೂಸುಫ್ ಕರಿಮಜಲ್ ಆಯ್ಕೆಯಾದರು. ವಾಲಂಟಿಯರ್ ಉಸ್ತುವಾರಿಗಳಾಗಿ ಸಾಜಿದ್ ಪಾಟ್ರಕೋಡಿ, ಮಜೀದ್ ಪಾಟ್ರಕೋಡಿ, ಉವೈಸ್ ಬೀಟಿಗೆ, ರಫೀಕ್ ಬೀಟಿಗೆ, ಮೀಡಿಯಾ ಉಸ್ತುವಾರಿಗಳಾಗಿ ಸಲೀಂ ಮಾಣಿ, ಶಿಹಾಬುರ್ರಹ್ಮಾನ್ ಹಸನ್‌ನಗರ ಆಯ್ಕೆಯಾದರು.
ಸದಸ್ಯರುಗಳಾಗಿ ಉಮರ್ ಯುಎಸ್ ಕಬಕ, ಕುಂಞಿಮೋನು ಗೋವಾ, ಹೈದರ್ ಸಖಾಫಿ ಬುಡೋಳಿ, ಮುಹಮ್ಮದ್ ಹಬೀಬ್ ಶೇರಾ, ಅಬ್ಬಾಸ್ ಪರ್ಲೋಟು, ಉಮರುಲ್ ಫಾರೂಕ್ ಹನೀಫಿ ಪರ್ಲೋಟು, ದಾವೂದ್ ಕಲ್ಲಡ್ಕ, ಯೂಸುಫ್ ಪಾಟ್ರಕೋಡಿ, ಕಾಸಿಂ ಪಾಟ್ರಕೋಡಿ, ಇಬ್ರಾಹೀಂ ಹಾಜಿ ಶೇರಾ, ಇಬ್ರಾಹೀಂ ಕಬಕ ಆಯ್ಕೆಯಾದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ನಾಯಕರಾದ ಸಿನಾನ್ ಸಅದಿ ಪಾಳ್ಯತ್ತಡ್ಕ, ಉಸೈದ್ ಸಖಾಫಿ ಮಾಣಿ, ನಾಸಿರ್ ಕುಕ್ಕಾಜೆ, ಶಾಕಿರ್ ಕೊಳ್ತಿಗೆ, ಸಿನಾನ್ ಸಖಾಫಿ ಕಬಕ, ಬಶೀರ್ ಮೀನಾವು, ರಶೀದ್ ಸಖಾಫಿ ಹಾಗೂ ಅಹ್ಮದ್ ಮದೀನಿ ಅಜ್ಜಿಕಟ್ಟೆ ಉಪಸ್ಥಿತರಿದ್ದರು. ಸಲಾಂ ಹನೀಫಿ ಸ್ವಾಗತಿಸಿ ವಂದಿಸಿದರು.