ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ-ಸ್ವಚ್ಚತಾ ಕಾರ್ಯಕ್ರಮ

0

ಕಡಬ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಇವರ 64ನೇ ಜನುಮ ದಿನದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕಡಬ ಘಟಸಮಿತಿ ವತಿಯಿಂದ ಶಾಲಾಬಿವೃದ್ದಿ ಸಮಿತಿಯ ಸಹಕಾರದೊಂದಿಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬದಲ್ಲಿ ಹಾಗೂ ಕಡಬ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಶಾಲಾ ಮುಖ್ಯಗುರು ಆನಂದ ಅಜಿಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ನಡೆಯುವ ಸ್ವಚ್ಚತಾ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿ ಮೂಡಿ ಬರಲಿ ಎಂದು ಶಾಲೆಗೆ ಗ್ರಾಮ ವಿಕಾಸ ಯೋಜನೆ ಮೂಲಕ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಮುಂದೆಯೂ ಶಾಲೆಯೊಂದಿಗೆ ಯೋಜನೆಯ ಬಾಂಧವ್ಯ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಕುಸುಮಾವತಿ, ತಾಲೂಕು ಮೇಲ್ವಿಚಾರಕಿ ಕಾವ್ಯಲಕ್ಷ್ಮೀ ಯೋಜನೆಯ ಲೆಕ್ಕ ಪರಿಶೋದಕರಾದ ಶ್ರೀಕೃತಿ ಸೇವಾದಿಕ್ಷಿತೆ ನಯನ ಕುಮಾರಿ, ಘಟ ಸಮಿತಿ ಅಧ್ಯಕ್ಷ ಯಶೋಧರ ಪೂವಳ, ಕಾರ್ಯದರ್ಶಿ ಸುಖೇಶ್ ಕುಮಾರ್ ಕಡಬ, ಪದಾಧಿಕಾರಿಗಳಾದ ಮೋನಪ್ಪ ,ಹರೀಶ್, ಸುಂದರಿ, ಧರ್ಮಪಾಲ ಮತ್ತು ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಬ್ಯಾಂಕಿನ ನಿರ್ದೇಶಕರಾದ ಸೋಮಪ್ಪ ನಾಯ್ಕ್ , ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಸೀತಾರಾಮ ಗೌಡ ಗುರುಕೃಪಾ, ಕಡಬ ಘಟ ಸಮಿತಿಯ ಸರ್ವ ಸದಸ್ಯರು ಭಾಗವಹಿಸಿದ್ದರು.
ಸ್ವಚ್ಚತಾ ಅಭಿಯಾನದಲ್ಲಿ ಶಾಲೆ ಮತ್ತು ಅಂಗನವಾಡಿ ಪರಿಸರ ,ಆಟದ ಮೈದಾನದಲ್ಲಿ ಹುಲ್ಲು, ಗಿಡಗಂಟಿಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು.

LEAVE A REPLY

Please enter your comment!
Please enter your name here