ರಾಮಕುಂಜ: ದ.ಕ ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಸನ್ ವತಿಯಿಂದ ಪುತ್ತೂರು ವಲಯ ಸದಸ್ಯರಿಗೆ ಆಟಿಡ್ ಒಂಜಿ ಕ್ರೀಡಾಕೂಟ ಶ್ರೀ ರಾಮಕುಂಜ ವಿದ್ಯಾಲಯದ ಕ್ರೀಡಾಂಗಣದಲ್ಲಿ ಆ.3ರಂದು ನಡೆಯಿತು.

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವ ಛಾಯಗ್ರಾಹಕರು ಒಂದೆಡೆ ಸೇರಿ ಸಂಭ್ರಮಿಸುವ ಕ್ಷಣ ಎಲ್ಲರ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ದೇಹ ಮನಸ್ಸನ್ನು ಹತೋಟಿಯಲ್ಲಿಡುವ ಕ್ರೀಡೆಯಲ್ಲಿ ಪ್ರತಿಯೊಬ್ಬ ಛಾಯಗ್ರಾಹಕನು ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ತೋರ್ಪಡಿಸುವುದರೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಬೇಕು ಎಂದರು.
ದ.ಕ ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಸನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಕ್ರೀಡಾಕೂಟ ಉದ್ಘಾಟಿಸಿ ಶುಭಹಾರೈಸಿದರು. ಎಸ್‌ಕೆಪಿಎ ಪುತ್ತೂರು ವಲಯ ಅಧ್ಯಕ್ಷ ರಘು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದ.ಕ ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಸನ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರಧ್ವಜ್ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಎಸ್.ಕೆ.ಪಿ.ಎ ಪುತ್ತೂರು ವಲಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದ ರಾಮಕುಂಜ ಗ್ರಾಮದ ಛಾಯಗ್ರಾಹಕರಾದ ಕರುಣಾಕರ, ರಾಜೇಶ್, ಗಣೇಶ್ ಕಟ್ಟಪುಣಿ ಅವರನ್ನು ಗೌರವಿಸಲಾಯಿತು. ವಿಶೇಷ ಕ್ರೀಡಾಸಾಧನೆಗಾಗಿ ಸಮರ್ಥ್ ಬಾಹುಬಲಿ ಯಲ್ಲಟ್ಟಿ, ಓಜಸ್ ಎಮ್.ಸಿ,ಅವರನ್ನು ಸನ್ಮಾನಿಸಲಾಯಿತು.
ಎಸ್‌ಕೆಪಿಎ ಪುತ್ತೂರು ವಲಯದ ಗೌರವಾಧ್ಯಕ್ಷ ಹರೀಶ್ ಎಲಿಯ ಪ್ರಸ್ತಾವಿಸಿದರು. ಕರುಣಾಕರ ದೊಡ್ಡಉರ್ಕ ಸ್ವಾಗತಿಸಿದರು. ಕ್ರೀಡಾಕಾರ್ಯದರ್ಶಿ ವಿನಯ್ ರೈ ವಂದಿಸಿದರು. ರವಿಚಂದ್ರ ರೈ ಮುಂಡೂರು, ಗಣೇಶ್ ಕಟ್ಟಪುಣಿ ನಿರೂಪಿಸಿದರು. ಛಾಯಗ್ರಾಹಕರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ವಿವಿಧ ಕ್ರೀಡೆಗಳು ನಡೆಯಿತು. ಸಾಯಂಕಾಲ ನಡೆದ ಸಮರೋಪದಲ್ಲಿ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರಧ್ವಾಜ್ ಬಹುಮಾನ ವಿತರಿಸಿದರು. ರವಿಕಿರಣ್, ವಿನಯ್ ರೈ ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು.