ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಅಧ್ಯಕ್ಷತೆಯಲ್ಲಿ ಆ.7 ರಂದು ನಡೆಯಿತು.
ಉಪಾಧ್ಯಕ್ಷ ಮಹೇಶ್.ಕೆ ಸದಸ್ಯರಾದ ಲಲಿತಾ ಚಿದಾನಂದ, ಮೊಯಿದುಕುಂಞ, ಸುಮಲತಾ, ಲಲಿತ, ರಮ್ಯಾ, ಚಂದ್ರಶೇಖರ ರೈ, ಗಂಗಾಧರ ಗೌಡ, ಪವಿತ್ರ.ಡಿ, ಪಾರ್ವತಿ.ಎಂ, ಬೇಬಿ ಜಯರಾಂ, ಉಮಾವತಿ.ಜಿ, ಪ್ರಕಾಶ್ ರೈ ಬೈಲಾಡಿ ಉಪಸ್ಥಿತರಿದ್ದರು. ಪಿಡಿಒ ಸೌಮ್ಯ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ, ಗ್ರಂಥ ಪಾಲಕಿ ಪ್ರೇಮಲತಾ ಸಹಕರಿಸಿದರು.