ಆ.8 ಪಾಣಾಜೆ ರಣಮಂಗಲ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ, ಕಥಾ ಪ್ರವಚನ

0

ನಿಡ್ಪಳ್ಳಿ : ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ‌‌  ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ 3 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವೃತ ಕಥಾ ಪ್ರವಚನ ಕಾರ್ಯಕ್ರಮ ವೇದ ಮೂರ್ತಿ ಶ್ರೀಕೃಷ್ಣ ಭಟ್ ಬಟ್ಯಮೂಲೆ ಇವರ ಪೌರೋಹಿತ್ಯದಲ್ಲಿ ಆ.8 ರಂದು ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ.

      ಕಾರ್ಯಕ್ರಮಗಳು; ಬೆಳಿಗ್ಗೆ ಗಂಟೆ 8 ರಿಂದ ಭಜನಾ ಕಾರ್ಯಕ್ರಮ. ಗಂಟೆ 9 ರಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಅರಂಭವಾಗುವುದು.ಗಂಟೆ 11 ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷೆ ಗೀತಾ ಆರ್.ರೈ ವಹಿಸಲಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿಯ ಸಹ ಪ್ರಾಧ್ಯಾಪಕರಾದ ಹರಿಣಿ ಪುತ್ತೂರಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಡಾ.ಪ್ರಸನ್ನ ಅಖಿಲೇಶ್ ಗಾರ್ಡನ್ ವ್ಯೂ ಪಾಣಾಜೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ 1 ಕ್ಕೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಪೂಜಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here