ಖಾಸಗಿ ಬಸ್ ಚಾಲಕ- ಮಾಲಕರ ಸಂಘದಿಂದ ಶ್ರಮದಾನ : ಹೆದ್ದಾರಿಯ ಹೊಂಡ ಮುಚ್ಚುವ ಕಾರ್ಯ

0


ಉಪ್ಪಿನಂಗಡಿ: ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಹೊಂಡ-ಗುಂಡಿಗಳನ್ನು ಮುಚ್ಚಲು ಇಲಾಖೆ ವಿಫಲವಾದ ಹಿನ್ನೆಲೆ ಖಾಸಗಿ ಬಸ್ ಚಾಲಕ-ಮಾಲಕರ ಸಂಘ ಶ್ರಮದಾನದ ಮೂಲಕ ರಸ್ತೆಯ ಹೊಂಡ-ಗುಂಡಿಗಳನ್ನು ಮುಚ್ಚಿದರು.


ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಶಿವಗಿರಿ, ನೇಜಿಕಾರ್ ಸೇರಿದಂತೆ ಹಲವೆಡೆ ಹೆದ್ದಾರಿಯಲ್ಲಿ ಭಾರೀ ಹೊಂಡಗಳು ನಿರ್ಮಾಣವಾಗಿತ್ತು. ಸಂಘದ ಪದಾಧಿಕಾರಿಗಳು ಒಂದು ದಿನದ ಕಾಯಕವನ್ನು ಬದಿಗೊತ್ತಿ ಬೃಹತ್ ಹೊಂಡಗಳನ್ನು ಕಲ್ಲು ಹಾಗೂ ಜಲ್ಲಿ ಹುಡಿ ಬಳಸಿ ಮುಚ್ಚಿದರು. ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಸಿದ್ದೀಕ್ ಕೆಂಪಿ, ಇಲ್ಲಿನ ರಸ್ತೆಯಲ್ಲಿ ಹೊಂಡ- ಗುಂಡಿಗಳು ನಿರ್ಮಾಣವಾಗಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದಿದ್ದಾಗ ನಾವು ಜಾತಿ-ಮತ ಬೇಧವಿಲ್ಲದೆ ಒಂದು ದಿನದ ಶ್ರಮದಾನ ನಡೆಸಿ ಬೃಹತ್ ಹೊಂಡಗಳನ್ನು ಮುಚ್ಚುವ ಕೆಲಸ ಮಾಡಿದ್ದೇವೆ ಎಂದರು.

ಪದಾಧಿಕಾರಿಗಳಾದ ಇಲ್ಯಾಸ್ ಕರಾಯ, ನಾರಾಯಣ ಗೌಡ ಪುತ್ತೂರು, ಜಯರಾಮ ಅಚಾರ್ಯ ಗರಡಿ, ಚಾಬಕ್ಕ, ಬಾಬಣ್ಣ ಮತ್ತಿತರರು ಶ್ರಮದಾನದಲ್ಲಿ ತೊಡಗಿಸಿಕೊಂಡರು.

LEAVE A REPLY

Please enter your comment!
Please enter your name here