ಆ.10ಕ್ಕೆ ಮಂಡ್ಯದಲ್ಲಿ ಕೆ.ಆರ್.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ

0

ದ.ಕ.ಜಿಲ್ಲೆಯಿಂದ 300 ಮಂದಿ ಭಾಗವಹಿಸುವ ನಿರೀಕ್ಷೆ – ಅಧ್ಯಕ್ಷ ವೇಣುಗೋಪಾಲ್

ಪುತ್ತೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 6ನೇ ಸಂಸ್ಥಾಪನಾ ದಿನ ಮತ್ತು ಮಹಾ ಅಧಿವೇಶನ ಆ.10ರಂದು ಮಂಡ್ಯದ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಆರ್‌ಎಸ್ ಪಾರ್ಟಿಯ ದ.ಕ.ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


2019ರ ಆ.10ರಂದು ಬೆಂಗಳೂರಿನಲ್ಲಿ ಪಕ್ಷವು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಅವರಿಂದ ಉದ್ಘಾಟನೆಗೊಂಡು ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಅನ್ಯಾಯಗಳ ವಿರುದ್ಧ ಮತ್ತು ನಾಡು ನುಡಿಯ ಸಂರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಅನೇಕ ಅಭಿಯಾನಗಳನ್ನು ಮಾಡಿದ್ದೇವೆ. ಪಕ್ಷದಲ್ಲಿ ರಾಜ್ಯವ್ಯಾಪಿ ಸುಮಾರು 55 ಸಾವಿರ ಮಂದಿ ಸದಸ್ಯರಿದ್ದಾರೆ. ದಕ್ಷಿಣ ಕನ್ನಡದಲ್ಲಿ 300 ಮಂದಿ ಸದಸ್ಯರಿದ್ದಾರೆ. ಇನ್ನು ತಾಲೂಕು ವ್ಯಾಪ್ತಿಯಲ್ಲೂ ಪಕ್ಷ ಸಂಘಟನೆ ಮಾಡಲಿದ್ದೇವೆ. ಸಂಸ್ಥಾಪನಾ ದಿನ ಮತ್ತು ಮಹಾ ಅಧಿವೇಶನದಲ್ಲಿ ರಾಜ್ಯದ ಎಲ್ಲಾ ಭಾಗಗಳ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಬೆಂಬಲಿಗರು ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಮಂದಿ ಕಾರ್ಯಕ್ರಮಕ್ಕೆ ಭಾಗವಹಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತ, ಕಾರ್ಯದರ್ಶಿಗಳಾದ ಶಿವರಾಜ್, ಸಿಜು ವಿ.ಕೆ ಮತ್ತು ಉಪಾಧ್ಯಕ್ಷ ಮಿನಿ ಪಿಂಟೊ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here