ಉಪ್ಪಿನಂಗಡಿ: ಇಲ್ಲಿನ ಸಿಟಿಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯ ಮದರ್ ಗೋಲ್ಡ್ ಹತ್ತಿರದ ಸಿಟಿ ಮಾರ್ಕೆಟ್‌ಗೆ ಸ್ಥಳಾಂತರಗೊಂಡಿದ್ದು, ಆ.7ರಂದು ಶುಭಾರಂಭಗೊಂಡಿತು.
ಬೆಳ್ತಂಗಡಿ ದಾರುಸ್ಸಲಾಂನ ಜೆಫ್ರಿ ಮುತ್ತುಕೋಯ ತಂಙಳ್ ಮಜ್ಲಿಸುನ್ನೂರ್ ರಿಬ್ಬನ್ ಕತ್ತರಿಸಿದರು. ಕುಪ್ಪೆಟ್ಟಿ ಮಸೀದಿಯ ಸಾದಾತ್ ತಂಙಳ್ ದುವಾರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಕರುವೇಲು ಜುಮಾ ಮಸೀದಿಯ ಆನಸ್ ತಂಙಳ್, ಜಿಫ್ರಿ ತಂಙಳ್ ಬೆಳ್ತಂಗಡಿ, ಮುಖ್ಯ ಅತಿಥಿಗಳಾಗಿ ಅಬೂಬಕ್ಕರ್, ರಝಾಕ್, ಸಿದ್ದೀಕ್ ಮೇದರಬೆಟ್ಟು, ಡಾ. ರಾಜಾರಾಮ್ ಕೆ.ಬಿ., ಧೂಮ್ ಧಮಾಕ ಮಾಲಕರಾದ ರಝಾಕ್, ಉಪ್ಪಿನಂಗಡಿಯ ಮಾಲೀಕುದೀನಾರ್ ಜುಮಾ ಮಸೀದಿಯ ಖತೀಬರಾದ ಸಲಾಂ ಫೈಝಿ, ನೆಕ್ಕಿಲಾಡಿ, ಕುದ್ಲೂರು, ಕರುವೇಲು, ಕಡವಿನಬಾಗಿಲು, ಜೋಗಿಬೆಟ್ಟುವಿನ ಖತೀಬರು ಹಾಗೂ ಉಸ್ತಾದ್‌ಗಳು ಆಗಮಿಸಿ ಶುಭ ಹಾರೈಸಿದರು. ಸಿಟಿಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕರಾದ ಅಬ್ದುರ್ರಹ್ಮಾನ್, ಮಕ್ಕಳಾದ ನಾಸೀರ್, ಶಬೀರ್, ಸಿಬ್ಬಂದಿ ವರ್ಗದವರು ಅತಿಥಿಗಳನ್ನು ಸ್ವಾಗತಿಸಿದರು.
