ಆ.11,12: ನಗರಸಭೆ ಕಚೇರಿ ಆವರಣದಲ್ಲಿ ಮರುಬಳಕೆ, ಪುನರ್‌ಬಳಕೆ ಪರಿಕಲ್ಪನೆಯಲ್ಲಿ ಪರಿಸರ ಸಂರಕ್ಷಣೆ ಅಭಿಯಾನ

0

ಪುತ್ತೂರು: ಪರಿಸರವನ್ನು ಸಂರಕ್ಷಿಸುವ ಸದುದ್ದೇಶದಿಂದ ಪುತ್ತೂರು ನಗರಸಭೆ ಮತ್ತು ಸಾಹಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ ಪುತ್ತೂರು ನಗರಸಭೆ ಕಚೇರಿ ಆವರಣದಲ್ಲಿ ಆ.11 ಮತ್ತು 12ರಂದು ಕಡಿಮೆಗೊಳಿಸುವುದು, ಮರುಬಳಕೆ, ಪುನರ್ ಬಳಕೆ ಎಂಬ ಪರಿಕಲ್ಪನೆಯಡಿ ’ರಿಪೇರಿ ಮಾಡಿ’ ಅನ್ನುವ ಘೋಷ ವಾಕ್ಯದೊಂದಿಗೆ ಅಭಿಯಾನ ನಡೆಯಲಿದೆ.


ಮನೆಯಿಂದ ತರುವಂತಹ ಹಳೆ ಬಟ್ಟೆಯಿಂದ ಬಟ್ಟೆ ಬ್ಯಾಗ್, ಮುರಿದು ಹೋದ ಕೊಡೆ ತಂದಲ್ಲಿ ರಿಯಾಯಿತಿ ಧರದಲ್ಲಿ ರಿಪೇರಿ ಮಾಡಿ ಕೊಡುವ ಅಭಿಯಾನ ಎರಡು ದಿನ ನಡೆಯಲಿದೆ. ಜನಸಾಮಾನ್ಯರು ನವೀಕರಿಸಿ ಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ಸಂರಕ್ಷಿಸುವ ಸದುದ್ದೇಶದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕೋರಲಾಗಿದೆ ಎಂದು ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here