ಕಡಬ: ಆನ್ಲೈನ್ ವ್ಯವಹಾರ ನಡೆಸುತ್ತಿರುವ ಅಮೆಜಾನ್ ಸಂಸ್ಥೆ ಕಡಬದ ಮೆಸ್ಕಾಂ ಅಧಿಕಾರಿ ಸಜಿಕುಮಾರ್ ಅವರಿಗೆ ದೋಖಾ ಎಸಗಿರುವುದಾಗಿ ಆರೋಪಿಸಿದ್ದಾರೆ.
ಕಡಬ ಮೆಸ್ಕಾಂ ಅಧಿಕಾರಿ ಸಜಿಕುಮಾರ್ ಎಂಬವರು ತನ್ನ ಮಗನಿಗಾಗಿ ಸ್ವಾತಂತ್ರ್ಯೋತ್ಸವಕ್ಕೆ ಬಳಕೆ ಮಾಡಲು ಆನ್ ಲೈನ್ ಬುಕ್ಕಿಂಗ್ ಸಂಸ್ಥೆ ಅಮೆಜಾನ್ ನಲ್ಲಿ ಬ್ಯಾಡ್ಜ್ ಬುಕ್ ಮಾಡಿದ್ದರು. ಇದಕ್ಕಾಗಿ ಆನ್ಲೈನ್ ಮೂಲಕ 1,300 ರೂ ಪಾವತಿಸಿದ್ದರು. ಆದರೆ ಅವರ ವಿಳಾಸಕ್ಕೆ ವೈದ್ಯರು ಬಳಕೆ ಮಾಡುವ ಪರಿಕರಗಳು ಬಂದಿರುವುದಾಗಿ ಆರೋಪಿಸಲಾಗಿದೆ.
ಅಸಮಧಾನಗೊಂಡ ಸಜಿಕುಮಾರ್ ತನಗೆ ಬಂದಿರುವ ನಂಬರ್ಗೆ ಕಾಲ್ ಮಾಡಿದ್ದಾರೆ. ಸಂಸ್ಥೆಯ ಪ್ರತಿನಿಧಿಗಳು ಎಂದು ವಿಚಾರಿಸುವಾಗ ಮೊಬೈಲ್ನಲ್ಲೇ ಮಾತಿನ ಚಕಮಕಿಯಾಗಿದೆ. ಸಜಿಕುಮರ್ ಆರ್ಡರ್ ಕ್ಯಾನ್ಸಲ್ ಗೆ ಬರೆದರೂ ಅದು ಸ್ವೀಕೃತವಾಗಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ವವರಿಗೆ ದೂರು ನೀಡಲಾಗಿದ್ದು, ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.